“ಮದ್ರಸಗಳಲ್ಲಿ ತಾಲಿಬಾನಿಗಳ ಸೃಷ್ಟಿ”: ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ

Prasthutha|

ಕಲಬುರಗಿ: ಓಲೈಕೆ ರಾಜಕಾರಣದಿಂದ ಇನ್ನಷ್ಟು ಪಾಕಿಸ್ತಾನಗಳು ಸೃಷ್ಟಿಯಾಗುತ್ತವೆ. ಮದ್ರಸಗಳಲ್ಲಿ ತಾಲಿಬಾನಿಗಳು ಸೃಷ್ಟಿಯಾಗುತ್ತಾರೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದೂಗಳು ಬಹುಸಂಖ್ಯಾತರು ಇರುವವರಗೆ ಮಾತ್ರ ಅಂಬೇಡ್ಕರ್ ಸಂವಿಧಾನ ಉಳಿಯುತ್ತದೆ. ಹಿಂದೂಗಳು ಅಲ್ಪಸಂಖ್ಯಾತರಾದರೆ ಗಾಂಧಾರ ಕಾಲದ ಸ್ಥಿತಿ ಬರುತ್ತದೆ ಎಂದರು.

- Advertisement -

ನಮ್ಮ ಮೂಲ ನಂಬಿಕೆಯಲ್ಲಿಯೇ ಸಮಭಾವವಿದೆ. ಸಮಭಾವದ ಬಹುಸಂಖ್ಯಾತರಿದ್ದಾಗ ಸಮಾನತೆ, ಮಹಿಳೆಗೆ ಸ್ವಾತಂತ್ರ್ಯ ಇರುತ್ತದೆ. ಇಲ್ಲದಿದ್ದರೆ ಅಫ್ಘಾನಿಸ್ತಾನದ ಸ್ಥಿತಿ ನಮಗೂ ಬರುತ್ತದೆ ಎಂದರು. ದೇಶ ಮೊದಲು ಎನ್ನುವ ತತ್ವದ ಮೇಲೆ ರಾಜಕಾರಣ ಮಾಡಿ. ಆದರೆ ಕಾಂಗ್ರೆಸ್ ದೇಶ ಮೊದಲು ಎಂಬ ತತ್ವ ಮರೆತಿದೆ. ದೇಶ ಭಕ್ತ‌ ಸಂಘಟನೆ ಜೊತೆ ತಾಲಿಬಾನಿಗಳನ್ನು ಹೋಲಿಕೆ ಮಾಡುತ್ತಿದ್ದಾರೆ ಎಂದು ಸಿಟಿ ರವಿ ಹೇಳಿದ್ದಾರೆ.

- Advertisement -