ಮಂಡ್ಯ ಮೂಲದ ಡಾ. ವಿವೇಕ್ ಮೂರ್ತಿಗೆ ಅಮೆರಿಕದ ಜೋ ಬೈಡನ್ ಸರಕಾರದಲ್ಲಿ ಸಚಿವ ಸ್ಥಾನದ ಸಾಧ್ಯತೆ

Prasthutha|

ವಾಷಿಂಗ್ಟನ್ : ಭಾರತ ಮೂಲದ, ಅದರಲ್ಲೂ ಕರ್ನಾಟಕದ ಮಂಡ್ಯ ಮೂಲದ ಮಾಜಿ ಸರ್ಜನ್ ಜನರಲ್ ಡಾ. ವಿವೇಕ್ ಮೂರ್ತಿ ಅವರಿಗೆ ಅಮೆರಿಕದ ಭಾವೀ ಅಧ್ಯಕ್ಷ ಜೋ ಬೈಡನ್ ನೇತೃತ್ವದ ಸರಕಾರದ ಸಚಿವ ಸಂಪುಟದಲ್ಲಿ ಸ್ಥಾನ ಲಭಿಸಲಿದೆ ಎನ್ನಲಾಗುತ್ತಿದೆ.

- Advertisement -

ಅಲ್ಲದೆ, ಇನ್ನೋರ್ವ ಭಾರತೀಯ ಮೂಲದ ಪ್ರೊ. ಅರುಣ್ ಮಜುಂದಾರ್ ಅವರಿಗೂ ಸಚಿವ ಸಂಪುಟದಲ್ಲಿ ಸ್ಥಾನ ಸಿಗಲಿದೆ. ಪ್ರಸ್ತುತ ಭಾವೀ ಅಧ್ಯಕ್ಷರಾದ ಜೋ ಬೈಡನ್ ಅವರ ಕೋವಿಡ್ 19 ಕಾರ್ಯಪಡೆಗೆ ಪ್ರಮುಖ ಸಲಹೆಗಾರರಾಗಿ ಡಾ. ವಿವೇಕ್ ಮೂರ್ತಿ ಸೇವೆ ಸಲ್ಲಿಸುತ್ತಿದ್ದಾರೆ. ಡಾ. ವಿವೇಕ್ ಮೂರ್ತಿ ಅವರು ಮಂಡ್ಯ ಜಿಲ್ಲೆಯ ಹಲ್ಲಗೆರೆ ಮೂಲದವರು.

ಮಜೂಂದಾರ್ ಅವರೂ ನೂತನ ಸರಕಾರದಲ್ಲಿ ಸ್ಥಾನ ಪಡೆಯಲಿದ್ದಾರೆ ಎನ್ನಲಾಗುತ್ತಿದೆ. ಈ ಹಿಂದೆ ಅವರು ಬರಾಕ್ ಒಬಾಮ ಸರಕಾರದಲ್ಲಿ ಆಧುನಿಕ ಸಂಶೋಧನಾ ಯೋಜನೆಗಳ ಸಂಸ್ಥೆ – ಎನರ್ಜಿಯ ಮೊದಲ ನಿರ್ದೇಶಕರಾಗಿ ಮೂರು ವರ್ಷ ಸೇವೆ ಸಲ್ಲಿಸಿದ್ದರು. ಪ್ರಸ್ತುತ ಅವರು ಬೈಡನ್ ಅವರ ಇಂಧನ ಸಂಬಂಧಿ ವಿಚಾರಗಳಿಗೆ ಪ್ರಮುಖ ಸಲಹೆಗಾರರಾಗಿದ್ದಾರೆ.

- Advertisement -

ಭಾರತ ಮೂಲದ ಕಮಲಾ ಹ್ಯಾರಿಸ್ ಈಗಾಗಲೇ ಅಮೆರಿಕದ ಉಪಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ.  

Join Whatsapp