ಲಕ್ಷ್ಮಿ ವಿಲಾಸ್ ಬ್ಯಾಂಕ್ ಗೆ ಆರ್ ಬಿಐ ನಿಷೇಧ | ಸಂಕಷ್ಟದಲ್ಲಿ ಷೇರುದಾರರು

Prasthutha|

ಚೆನ್ನೈ : ತಮಿಳುನಾಡು ಮೂಲದ ಖಾಸಗಿ ಬ್ಯಾಂಕ್ ಲಕ್ಷ್ಮಿ ವಿಲಾಸ್ ಬ್ಯಾಂಕ್ ಗೆ ಆರ್ ಬಿಐ ಮಂಗಳವಾರ ಒಂದು ತಿಂಗಳ ನಿಷೇಧ ಹೇರಿದ ಬಳಿ, ಬ್ಯಾಂಕಿನ ಷೇರುದಾರರು ಸಂಕಷ್ಟಕ್ಕೀಡಾಗಿದ್ದಾರೆ.

- Advertisement -

ಲಕ್ಷ್ಮಿ ವಿಲಾಸ್ ಬ್ಯಾಂಕ್ ಗೆ ಒಂದು ತಿಂಗಳ ನಿಷೇಧ ಹೇರಲಾಗಿದೆ. ಬ್ಯಾಂಕಿನ ಠೇವಣಿದಾರರ ಆಸಕ್ತಿಯನ್ನು ಸಂಪೂರ್ಣವಾಗಿ ರಕ್ಷಿಸಲಾಗುವುದು ಎಂದು ಭರವಸೆ ನೀಡಲಾಗಿದೆ. ವಿತ್ ಡ್ರಾ ಮಿತಿಯನ್ನು 25,000 ರೂ.ಗೆ ಮಿತಿ ನಿಗದಿಪಡಿಸಲಾಗಿದೆ. ಯಾವುದೇ ವಸ್ತುವಿಗೆ ಸಂಬಂಧಿಸಿ ತಿಂಗಳಿಗೆ 50,000 ರೂ. ಮಾತ್ರ ಖರ್ಚು ಮಾಡಲು ಮಿತಿ ಹೇರಲಾಗಿದೆ.

ಲಕ್ಷ್ಮಿ ವಿಲಾಸ್ ಬ್ಯಾಂಕ್ ನ ಷೇರುಗಳು ಬುಧವಾರ ತೀವ್ರ ಕುಸಿತ ಕಂಡಿದ್ದು, ಆರಂಭಿಕ ವಹಿವಾಟಿನಲ್ಲಿ ಕನಿಷ್ಠ 12.45 ರೂ.ಗೆ ತಲುಪಿದೆ. ಹೀಗಾಗಿ ಷೇರುದಾರರು ಕಠಿಣ ಪರಿಸ್ಥಿತಿ ಎದುರಿಸುವಂತಾಗಿದೆ.

- Advertisement -

ಲಕ್ಷ್ಮಿ ವಿಲಾಸ್ ಬ್ಯಾಂಕ್ 563 ಶಾಖೆಗಳನ್ನು ಹೊಂದಿದ್ದು, 20,973 ಕೋಟಿ ರೂ. ಠೇವಣಿ ಹೊಂದಿದೆ. ಕೆನರಾ ಬ್ಯಾಂಕ್ ನ ಮಾಜಿ ನಾನ್ ಎಕ್ಸಿಕ್ಯೂಟಿವ್ ಚೇರ್ ಮ್ಯಾನ್ ಟಿ.ಎನ್. ಮನೋಹರನ್ ಅವರನ್ನು ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಕಲಂ 36 ಎಸಿಎ(2)ಯಡಿ ಲಕ್ಷ್ಮಿ ವಿಲಾಸ್ ಬ್ಯಾಂಕ್ ಗೆ ಆಡಳಿತಗಾರರನ್ನಾಗಿ ಆರ್ ಬಿಐ ನಿಯೋಜಿಸಿದೆ.

Join Whatsapp