ತೆಲುಗು ಕವಿ ವರವರ ರಾವ್ ನಾನಾವತಿ ಆಸ್ಪತ್ರೆಗೆ ವರ್ಗಾಯಿಸಲು ಹೈಕೋರ್ಟ್ ಸೂಚನೆ

Prasthutha|

ಮುಂಬೈ : ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಬಂಧಿತರಾಗಿರುವ ತೆಲುಗು ಕವಿ, ಸಾಮಾಜಿಕ ಕಾರ್ಯಕರ್ತ ವರವರ ರಾವ್ ಅವರನ್ನು ನಾನಾವತಿ ಆಸ್ಪತ್ರೆಗೆ ವರ್ಗಾಯಿಸಲು ಅನುಮತಿಸಲಾಗಿದೆ. ಅನಾರೋಗ್ಯ ಪೀಡಿತರಾಗಿರುವ ಅವರನ್ನು ಮುಂಬೈಯ ನಾನಾವತಿ ಆಸ್ಪತ್ರೆಗೆ 15 ದಿನಗಳ ಮಟ್ಟಿಗೆ ದಾಖಲಿಸಲು ಬಾಂಬೆ ಹೈಕೋರ್ಟ್ ಅನುಮತಿ ನೀಡಿದೆ.

ರಾವ್ ಅವರ ಪತ್ನಿ ಸಲ್ಲಿಸಿದ್ದ ಅರ್ಜಿಗೆ ಸಂಬಂಧಿಸಿ ಕೋರ್ಟ್ ಈ ವಿವರಣೆ ನೀಡಿದೆ. ರಾವ್ ಅವರನ್ನು ನಾನಾವತಿ ಆಸ್ಪತ್ರೆಗೆ ದಾಖಲಿಸುವ ಅಗತ್ಯತೆಯನ್ನು ಕೋರ್ಟ್ ಗೆ ಅವರ ನ್ಯಾಯವಾದಿ ಇಂದಿರಾ ಜೈಸಿಂಗ್ ಮನವರಿಕೆ ಮಾಡಿದರು. ಆಸ್ಪತ್ರೆಗೆ ವರ್ಗಾಯಿಸದಿದ್ದರೆ, ರಾವ್ ಅವರು ಕಸ್ಟಡಿಯಲ್ಲೇ ಕೊನೆಯುಸಿರೆಳೆಯುವ ಸಾಧ್ಯತೆಯಿದೆ ಎಂದು ಇಂದಿರಾ ಕೋರ್ಟ್ ಗೆ ತಿಳಿಸಿದ್ದರು.

- Advertisement -