ಕೂಲಿ ಕಾರ್ಮಿಕನಿಗೆ ಮಾರಣಾಂತಿಕ ಹಲ್ಲೆ: ಖಾಸಗಿ ಬಸ್ಸಿನ ಪರವಾನಿಗೆ ರದ್ದುಪಡಿಸಲು ಡಾ.ಸುಮತಿ ಹೆಗ್ಡೆ ಆಗ್ರಹ

Prasthutha|

ಮಂಗಳೂರು: ಇತ್ತೀಚೆಗೆ ನಿರುದ್ಯೋಗಿ ಗೂಂಡಾಗಳಿಂದ ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿರುವ ಬಡಕೂಲಿ ಕಾರ್ಮಿಕ ಇಸಾಕ್ ಮೂಲರಪಟ್ನ ಇವರನ್ನು ಜೆಡಿಎಸ್ ಮಂಗಳೂರು ದಕ್ಷಿಣ ಕ್ಷೇತ್ರದ ಅಭ್ಯರ್ಥಿ ಡಾ.ಸುಮತಿ ಹೆಗ್ಡೆ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು.

- Advertisement -

 ಈ ಸಂದರ್ಭ ಮಾತಾನಾಡಿದ ಅವರು, ಯಾರೇ ತಪ್ಪು ಮಾಡಿದರೂ ಅವರನ್ನು ತನಿಖೆ ಮಾಡಿ ಶಿಕ್ಷಿಸಲು ಪೊಲೀಸ್ ಇಲಾಖೆ ಇದೆ. ಜನರೇ ಕಾನೂನು ಕೈಗೆತ್ತಿಗೊಂಡರೆ ಪೊಲೀಸರಿಗೆ ಏನು ಕೆಲಸ ಎಂದು ಪ್ರಶ್ನಿಸಿದರು.

 ಈ ಘಟನೆಗೆ ಪ್ರಮುಖ ಕಾರಣ ಬಸ್ಸಿನ ಮಾಲೀಕರಾಗಿದ್ದು ಅದರ ಪರ್ಮಿಟ್  ಕ್ಯಾನ್ಸಲ್ ಮಾಡಬೇಕು. ತಪ್ಪಿತಸ್ಥರಿಗೆ  ಕಠಿಣ ಶಿಕ್ಷೆ ವಿಧಿಸುವ ಕಾರ್ಯ ಅತೀ ಶೀಘ್ರದಲ್ಲಿ ನಡೆಸುವ ಮೂಲಕ ಇಂತಹ ಘಟನೆಗಳಿಗೆ ಇತಿಶ್ರೀ ಹಾಡಬೇಕು  ಎಂದು ಆಗ್ರಹಿಸಿದರು.

- Advertisement -

  ಈ ಸಂದರ್ಭದಲ್ಲಿ ದ.ಕ. ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಜಾವೇದ್, ದ.ಕ.ಜಿಲ್ಲಾ  ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಲತೀಫ್ ಶಿವಭಾಗ್ , ಜೆಡಿಎಸ್ ಮುಖಂಡರಾದ ಅಲ್ತಾಫ್ ತುಂಬೆ ಹಾಗೂ ಇನ್ನಿತರ ಜೆಡಿಎಸ್  ಕಾರ್ಯಕರ್ತರು ಉಪಸ್ಥಿತರಿದ್ದರು.

Join Whatsapp