ದೇಶಕ್ಕಾಗಿ ಒಂದಷ್ಟು ಕಾಲ ಆಡುವ ಬಯಕೆ ಇದೆ: ಲಯೊನಲ್‌ ಮೆಸ್ಸಿ

Prasthutha|

ದೋಹಾ: ಇನ್ನೂ ಒಂದಷ್ಟು ಕಾಲ ದೇಶಕ್ಕಾಗಿ ಆಡುತ್ತೇನೆ ಎಂದು ಅರ್ಜೆಂಟೀನಾ ಫುಟ್ಬಾಲ್ ತಂಡದ ಕಪ್ತಾನ ಲಯೊನಲ್‌ ಮೆಸ್ಸಿ ಪ್ರತಿಜ್ಞೆ ಮಾಡಿದ್ದಾರೆ.

- Advertisement -


ಭಾನುವಾರ ನಡೆದ ವಿಶ್ವಕಪ್ ಫೈನಲ್‌ನಲ್ಲಿ ಫ್ರಾನ್ಸ್ ವಿರುದ್ಧ ಗೆದ್ದ ನಂತರ, ಅರ್ಜೆಂಟೀನಾದ ಸುದ್ದಿ ವಾಹಿನಿಯೊಂದಿಗೆ ಮಾತನಾಡಿರುವ ಮೆಸ್ಸಿ, ನನ್ನ ವೃತ್ತಿಜೀವನವು ಬಹುತೇಕ ಮುಗಿದಿದೆ. ಆದ್ದರಿಂದ ನಾನು ಹೆಚ್ಚೇನೂ ಬಯಸುವುದಿಲ್ಲ. ನಾನು ನನ್ನ ವೃತ್ತಿಜೀವನವನ್ನು ಪ್ರಶಸ್ತಿಯೊಂದಿಗೇ ಕೊನೆಗೊಳಿಸಲು ಬಯಸುತ್ತೇನೆ ಎಂದು ಹೇಳಿದರು.


ನಾನು ವಿಶ್ವ ಚಾಂಪಿಯನ್ ಆಗಿ ಇನ್ನೂ ಕೆಲವು ಪಂದ್ಯಗಳನ್ನು ಆಡಲು ಬಯಸುತ್ತೇನೆ. ಏಕೆಂದರೆ, ಫುಟ್‌ಬಾಲ್‌ ಕ್ರೀಡೆಯಲ್ಲಿ ಇದು ನನ್ನ ಕೊನೆಯ ದಿನಗಳು ಎಂದು ತಿಳಿಸಿದರು.

- Advertisement -


ವಿಶ್ವಕಪ್‌ ಟೂರ್ನಿಯು ನನ್ನ ವೃತ್ತಿಜೀವನದ ಕೊನೆಯ ಟೂರ್ನಿಯಾಗಲಿದೆ’ ಎಂದು ಲಯೊನಲ್‌ ಮೆಸ್ಸಿ ಕ್ರೀಡಾ ಕೂಟ ಆರಂಭವಾಗುವುದಕ್ಕೂ ಮುನ್ನ ಹೇಳಿದ್ದರು.

Join Whatsapp