ಮಂಗಳೂರು: ನಗರದಲ್ಲಿ ನಡೆಸಲು ಉದ್ದೇಶಿಸಿರುವ ಪೌರ ಸನ್ಮಾನ ಕಾರ್ಯಕ್ರಮದಲ್ಲಿ ರೋಹಿತ್ ಚಕ್ರತೀರ್ಥ ರಿಗೆ ಸನ್ಮಾನ ನಡೆಸುವುದು ಮಂಗಳೂರಿಗರಿಗೆ ಮಾಡುವ ಅವಮಾನ ಎಂದು ದೇಶಪ್ರೇಮಿಗಳ ಒಕ್ಕೂಟವು ಹೇಳಿಕೆ ನೀಡಿದೆ. ಜೊತೆಗೆ ಕಾರ್ಯಕ್ರಮ ರದ್ದುಪಡಿಸದೇ ಇದ್ದಲ್ಲಿ ನಾಳೆ ಸಂಜೆ ಡೊಂಗರಕೇರಿಯ ಕೆನರಾ ಹೈಸ್ಕೂಲ್ ನಲ್ಲಿ ಸಂಜೆ 5 ಗಂಟೆಗೆ ನಡೆಯುವ ಕಾರ್ಯಕ್ರಮಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದೆ.
ಮಂಗಳೂರು ದಕ್ಷಿಣ ಬಿಜೆಪಿ ಶಾಸಕ ವೇದವ್ಯಾಸ ಕಾಮತ್ ನೇತೃತ್ವದಲ್ಲಿ, ಮಂಗಳೂರು ವಿ ವಿ ಕುಲಪತಿ ಯಡಪಡಿತ್ತಾಯ ಅಧ್ಯಕ್ಷತೆಯಲ್ಲಿ ಮಾಡುತ್ತಿರುವ ನಾಗರಿಕ ಸನ್ಮಾನ ಕಾರ್ಯಕ್ರಮದಲ್ಲಿ ನಾರಾಯಣ ಗುರು, ಕಯ್ಯಾರ ಕಿಂಞ್ಞಣ್ಣ ರೈ, ಕುವೆಂಪು, ಬಸವಣ್ಣನವರಿಗೆ ಅವಮಾನಿಸಿದ ರೋಹಿತ್ ಚಕ್ರತೀರ್ಥಗೆ ಮಂಗಳೂರು ನಾಗರಿಕರಿಗೆ ಅವಮಾನ. ಆದ್ದರಿಂದ ಈ ಸನ್ಮಾನ ಕಾರ್ಯಕ್ರಮ ರದ್ದು ಪಡಿಸಲು ದೇಶಪ್ರೇಮಿ ಸಂಘಟನೆಗಳು ಒಕ್ಕೂಟ ಆಗ್ರಹಿಸಿದೆ.
ಡಿವೈಎಫ್ಐ ದಕ್ಷಿಣ ಕನ್ನಡ ಜಿಲ್ಲಾ ಸಮಿತಿ, ಯವ ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲೆ, ದಲಿತ ಸಂಘರ್ಷ ಸಮಿತಿ, ದಕ್ಷಿಣ ಕನ್ನಡ, ಸಿಐಟಿಯು ದ ಕ ಜಿಲ್ಲೆ, ಸಾಮರಸ್ಯ ಮಂಗಳೂರು, ಕಾಂಗ್ರೆಸ್ ಪಕ್ಷ ದ ಕ ಜಿಲ್ಲೆ, ಜಾತ್ಯಾತೀತ ಜನತಾ ದಳ ದ ಕ ಜಿಲ್ಲೆ, ಸಿಪಿಐಎಂ ದಕ್ಷಿಣ ಕನ್ನಡ ಜಿಲ್ಲೆ, ಭಾರತ ವಿದ್ಯಾರ್ಥಿ ಫೆಡರೇಷನ್ (SFI), NSUI ದಕ್ಷಿಣ ಕನ್ನಡ, ಮಾನವತಾ ವೇದಿಕೆ, ಅಖಿಲ ವಕೀಲರ ಭಾರತ ಸಂಘ ದ ಕ ಜಿಲ್ಲೆ, ಪ್ರಗತಿಪರ ಚಿಂತಕರ ವೇದಿಕೆ, ಜನವಾದಿ ಮಹಿಳಾ ಸಂಘ (JMS), ಸಿಪಿಐ ದಕ್ಷಿಣ ಕನ್ನಡ ಜಿಲ್ಲೆ, ನಾರಾಯಣ ಗುರು ಅಭಿಮಾನಿ ಬಳಗ ಮಂಗಳೂರು, AITUC ದ ಕ ಜಿಲ್ಲೆ, AIYF ದ ಕ ಜಿಲ್ಲಾ ಸಮಿತಿ, ಭಗತ್ ಸಿಂಗ್ ಕ್ರಾಂತಿ ಬಳಗ, INTUC ದಕ್ಷಿಣ ಕನ್ನಡ ಮುಂತಾದ ಸಂಘಟನೆಗಳು ಈ ಮುತ್ತಿಗೆಯನ್ನು ಬೆಂಬಲಿಸಿದ್ದು ಮುತ್ತಿಗೆಗೆ ಸಾಥ್ ಕೊಡುವುದಾಗಿ ಘೋಷಿಸಿದೆ.
ಈ ಎಲ್ಲಾ ಸಂಘಟನೆಗಳ ಕಾರ್ಯಕರ್ತರು ಸಂಜೆ 4 : 30 ಕ್ಕೆ ಸಿಟಿ ಸೆಂಟರ್ ಮಾಲ್ ನಿಂದ ಡೊಂಗರಕೇರಿಗೆ ಮೆರವಣಿಗೆಯಲ್ಲಿ ಹೋಗಿ ಮುತ್ತಿಗೆ ಹಾಕಲಾಗುತ್ತದೆ ಎಂದು ತಿಳಿದು ಬಂದಿದೆ.