ಅಗತ್ಯ ವಸ್ತು ಪೂರೈಸಿ ಅಫ್ಘನ್ ಗೆ ನೆರವಾದ ಭಾರತ : ಮೋ‍ದಿಗೆ ಥ್ಯಾಂಕ್ಸ್ ಹೇಳಿದ ತಾಲಿಬಾನ್ಸ್

Prasthutha|

ಕಾಬೂಲ್‌: ಭೂಕಂಪದಿಂದ ತತ್ತರಿಸಿರುವ ಅಫ್ಘಾನಿಸ್ತಾನಕ್ಕೆ ಅಗತ್ಯ ವಸ್ತುಗಳನ್ನು ರವಾಣಿಸಿ ಭಾರತ ಸರಕಾರ ನೆರವು ನೀಡಿದೆ. ಸಂತಸ್ತ್ರರಿಗೆ ನೆರವು ನೀಡಲು ಭಾರತ ಮುಂದಾಗಿದ್ದು, ಅಫ಼್ಘನ್ ಸರ್ಕಾರವು ಟ್ವೀಟ್ ಮೂಲಕ‌ ಮೋದಿಗೆ ಧನ್ಯವಾದ ತಿಳಿಸಿದ್ದಾರೆ.

- Advertisement -

ರಕ್ಷಣಾ ಕಾರ್ಯಾಚರಣೆಗೆ ಈಗಾಗಲೇ ತಂಡವೊಂದು ಕಾಬೂಲ್‌ ತಲುಪಿದೆ. ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ಅರಿಂದಮ್‌ ಬಾಗ್ಚಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಭಾರತದ ನಿರ್ಧಾರವನ್ನು ತಾಲಿಬಾನ್ ಸ್ವಾಗತಿಸಿದ್ದು, ಸಂಕಷ್ಟಕ್ಕೆ ಸಿಲುಕಿರುವ ಆಫ್ಘನ್ನರ ರಕ್ಷಣೆಗೆ ರಾಜತಾಂತ್ರಿಕರು ಮತ್ತು ತಾಂತ್ರಿಕ ತಂಡವನ್ನು ಕಾಬೂಲ್‌ನಲ್ಲಿರುವ ರಾಯಭಾರಿ ಕಚೇರಿಗೆ ಕಳುಹಿಸಿರುವ ಭಾರತದ ನಿರ್ಧಾರ ಸ್ವಾಗತಾರ್ಹ ಎಂದು ತಾಲಿಬಾನ್‌ ವಕ್ತಾರ ಅಬ್ದುಲ್‌ ಕಹರ್‌ ಬಾಲ್ಚಿ ತಿಳಿಸಿದ್ದಾರೆ.

ರಿಡ್ಜ್ ಟೆಂಟ್‌ಗಳು, ಸ್ಲೀಪಿಂಗ್‌ ಬ್ಯಾಗ್ಸ್‌, ಹೊದಿಕೆಗಳು, ಸ್ಲೀಪಿಂಗ್‌ ಮ್ಯಾಟ್‌ ಸೇರಿದಂತೆ ಇತ್ಯಾದಿ ಅಗತ್ಯ ವಸ್ತುಗಳನ್ನು ಅಪ್ಘಾನ್‌ ಜನತೆಗೆ ನೆರವಿಗಾಗಿ ಭಾರತ ರವಾನಿಸಿದೆ. ಆದರೆ ಭಾರತದ ಅಸ್ಸಾಂ ನಂತರ ರಾಜ್ಯಗಳಲ್ಲಿ ಪ್ರವಾಹ ಪೀಡಿತರಿಗೆ ಮಿಡಿಯದ ಕೇಂದ್ರ ಸರಕಾರ ತಾಲಿಬಾನಿಗಳಿಗೆ ಚಾಚಿದ ನೆರವಿನ ಹಸ್ತ ನೋಡಿ ಭಾರತೀಯರು ಆಶ್ಚರ್ಯಚಕಿತರಾಗಿದ್ದಾರೆ.

Join Whatsapp