ಕುಟುಂಬ ಜೀವನದ ಕುರಿತು ಗೌರವವಿಲ್ಲದ RSSನ್ನು ‘ಸಂಘ ಪರಿವಾರ್’ ಎಂದು ಕರೆಯುವುದು ತಪ್ಪಾಗುತ್ತದೆ : ರಾಹುಲ್ ಗಾಂಧಿ

Prasthutha|

ಕುಟುಂಬದ ಮಹಿಳೆಯರು, ಹಿರಿಯರ ಬಗ್ಗೆ ಗೌರವ, ಸಹಾನುಭೂತಿ ಮತ್ತು ವಾತ್ಸಲ್ಯ ಇಲ್ಲದ  ಆರ್‌ಎಸ್‌ಎಸ್ ಮತ್ತು ಅದರ ಸಂಬಂಧಿತ ಸಂಘಟನೆಗಳನ್ನು ‘ಸಂಘ ಪರಿವಾರ’ ಎಂದು ಕರೆಯುವುದು ತಪ್ಪಾಗುತ್ತದೆ ಎಂದು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಹೇಳಿದ್ದಾರೆ.

- Advertisement -

ಸಂಘ ಪರಿವಾರ ಒಂದು ಸಮುದಾಯವನ್ನು ಮತ್ತೊಂದು ಸಮುದಾಯದ ವಿರುದ್ಧ ಎತ್ತಿಕಟ್ಟಿ ಅಲ್ಪಸಂಖ್ಯಾತರನ್ನು ತುಳಿಯುವ “ಕೆಟ್ಟ ಪ್ರಚಾರ”ದ ಪರಿಣಾಮವಾಗಿ ಉತ್ತರ ಪ್ರದೇಶದಲ್ಲಿ ಕೇರಳ ಮೂಲದ ಸನ್ಯಾಸಿಗೆ ಕಿರುಕುಳ ನೀಡಲಾಗಿದೆ. ಆ ಕುರಿತಾಗಿನ ಆರೋಪದ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ತನ್ನ ಹೇಳಿಕೆ ನೀಡಿದ್ದಾರೆ. ಇದರ ಬಗ್ಗೆ ಇಂದು ಟ್ವೀಟ್‌ ಮಾಡಿರುವ ರಾಹುಲ್ ಗಾಂಧಿ, ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಇನ್ನು ಮುಂದೆ ‘ಸಂಘ ಪರಿವಾರ್’, ಅಂದರೆ ಒಂದು ಕುಟುಂಬ ಎಂದು ಉಲ್ಲೇಖಿಸುವುದಿಲ್ಲ ಎಂದು ಹೇಳಿದ್ದಾರೆ.

ಆರ್ ಎಸ್ಎಸ್ ಮತ್ತು ಸಂಬಂಧಿತ ಸಂಸ್ಥೆಗಳನ್ನು ಸಂಘ ಪರಿವಾರ ಎಂದು ಕರೆಯುವುದು ಸರಿಯಲ್ಲ ಎನ್ನುವುದು ನನ್ನ ಭಾವನೆ. ಕುಟುಂಬವೆಮ್ದರೆ ಅಲ್ಲಿ ಮಹಿಳೆಯರಿರುತ್ತಾರೆ, ವೃದ್ಧರ ಬಗ್ಗೆ ಗೌರವವಿರುತ್ತದೆ, ಸಹಾನುಭೂತಿ ಮತ್ತು ವಾತ್ಸಲ್ಯದ ಭಾವನೆ ಇರುತ್ತದೆ.  ಆದರೆ ಇದು ಯಾವುದು ಆರ್ ಎಸ್ಎಸ್ ನಲ್ಲಿ ಇಲ್ಲ” ಎಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದಾರೆ.

Join Whatsapp