‘ಅಪ್ಪಾ, ನೋವು ತಡೆಯಲಾಗುತ್ತಿಲ್ಲ’ । ಸೈನ್ಯದ ಗುಂಡಿಗೆ ತಂದೆಯ ಮಡಿಲಲ್ಲೇ ಪ್ರಾಣ ಬಿಟ್ಟ ಮಯನ್ಮಾರಿನ ಏಳರ ಬಾಲೆ !

Prasthutha|

►ತಂದೆಯತ್ತ ಓಡಿ ಹೋಗುತ್ತಿದ್ದ ಮಗುವಿನ ಮೇಲೆ ಸೈನಿಕರ ಗುಂಡೇಟು ।

ಮಯನ್ಮಾರಿನ ಸೇನಾ ದಂಗೆಯ ನಂತರ ಅಲ್ಲಿನ ಜನರ ಪರಿಸ್ಥಿತಿ ತೀರಾ ಹದೆಗೆಟ್ಟಿದೆ. ಜಗತ್ತಿನ ಪ್ರಮುಖ ರಾಷ್ಟ್ರಗಳು ಪ್ರಜಾಪ್ರಭುತ್ವ ಮರು ಸ್ಥಾಪನೆಗೆ ಒತ್ತಾಯಿಸುತ್ತಿದ್ದರೂ ಸೇನೆ ಮಾತ್ರ ತನ್ನ ಆಕ್ರಮಣ ಮುಂದುವರಿಸಿದೆ. ಇದೀಗ ಹೃದಯ ವಿದ್ರಾವಕ ಘಟನೆಯೊಂದು ಜಗತ್ತಿನ ಜನರ ಮನ ಕಲುಕಿದೆ. ಸೇನೆಗೆ ಹೆದರಿ ತನ್ನ ತಂದೆಯತ್ತ ಓಡಿ ಬರುತ್ತಿದ್ದ ಏಳರ ಹರೆಯದ ಬಾಲಕಿಯ ಮೇಲೆ ನಿರ್ದರ್ಯಿ ಮಯನ್ಮಾರ್ ಸೈನಿಕರು ಗುಂಡು ಹಾರಿಸಿದ್ದು, ಆ ಬಾಲಕಿ ತನ್ನ ತಂದೆಯ ಮಡಿಲಲ್ಲೇ ಪ್ರಾಣ ಬಿಟ್ಟಿದ್ದಾಳೆ. ಆ ವೇಳೆ ತನ್ನ ತಂದೆಯೊಂದಿಗೆ, ಅಪ್ಪಾ, ನನಗೆ ನೋವು ಸಹಿಸಲು ಸಾಧ್ಯವಾಗುತ್ತಿಲ್ಲ. ಅಷ್ಟೊಂದು ನೋವಾಗುತ್ತಿದೆ ಎಂದು ಹೇಳುತ್ತಲೇ ಕೊನೆಯುಸಿರೆಳೆದಿದೆ.

- Advertisement -

ಮಯನ್ಮಾರಿನ ಮಂಡಾಲಯದಲ್ಲಿರುವ ಬಾಲಕಿಯ ಮನೆಗೆ ತಪಾಸನೆಗೆಂದು ಬಂದಿದ್ದ ಸೈನಿಕರನ್ನು ಕಂಡು ಹೆದರಿದ ಬಾಲಕಿ ಮೋ ಚಿತ್ ತನ್ನ ತಂದೆಯ ಬಳಿಗೆ ಓಡಿ ಹೋಗಿದ್ದಾಳೆ. ಈ ವೇಳೆ ಸೈನಿಕರು ಆಕೆಯ ಮೇಲೆ ನಿಷ್ಕರುಣೆಯಿಂದ ಗುಂಡು ಹಾರಿಸಿದ್ದಾರೆ. ಮಗಳು ತನ್ನ ಕೈಯ್ಯಲ್ಲೇ ಕೊನೆಯುಸಿರೆಳೆಯುವ ಮುನ್ನ ವಿವರಿಸಿದ ನೋವಿನ ಅನುಭವಗಳನ್ನು ತಂದೆ ಉಮೋಂಗ್ ಕೆ ಹಾಶಿನ್ ಕಣ್ಣೀರಿಡುತ್ತಾ ಮಯನ್ಮಾರ್ ಮುಸ್ಲಿಮ್ ಮೀಡಿಯಾಕ್ಕೆ ತಿಳಿಸಿದ್ದಾರೆ. ನೋವಿನಿಂದ ಚೀರುತ್ತಿದ್ದ ಮಗಳನ್ನು ಕಾರಿನಲ್ಲಿ ಹಾಕಿ ನಾವು ಆಸ್ಪತ್ರೆಗೆ ತೆಗೆದುಕೊಂಡು ಹೋದರೂ ಅವಳ ಪ್ರಾಣವುಳಿಸಲು ಸಾಧ್ಯವಾಗಿಲ್ಲ ಎಂದು ಹಾಶಿನ್ ಹೇಳಿದ್ದಾರೆ. ಅವರ 19 ವರ್ಷದ ಮತ್ತೊರ್ವ ಮಗನನ್ನು ಸೇನೆ ಬಂಧಿಸಿ ಕರೆದುಕೊಂಡು ಹೋಗಿದೆ.

- Advertisement -