ಲಾಕ್ ಡೌನ್ ವೇಳೆ ಸೀಝ್ ಆದಂತ ನಿಮ್ಮ ವಾಹನಗಳನ್ನು ಬಿಡಿಸಿಕೊಳ್ಳೋದು ಹೇಗೆ ಗೊತ್ತಾ ? ಇಲ್ಲಿದೆ ಮಾಹಿತಿ

Prasthutha|

ಬೆಂಗಳೂರು : ರಾಜ್ಯದಲ್ಲಿ ಕೊರೋನ ಲಾಕ್ ಡೌನ್ ಕಾರಣದಿಂದಾಗಿ ಲಾಕ್ ಡೌನ್ ನಿಯಮಗಳನ್ನು ಮತ್ತಷ್ಟು ಕಠಿಣಗೊಳಿಸಲಾಗಿದೆ. ಲಾಕ್ ಡೌನ್ ಉಲ್ಲಂಘಿಸಿ, ರಸ್ತೆಗೆ ಇಳಿದಂತ ವಾಹನಗಳನ್ನು ಪೊಲೀಸರು ಯಾವುದೇ ಮುಲಾಜಿಲ್ಲದೆ ಸೀಜ್ ಮಾಡುತ್ತಿದ್ದಾರೆ. ಈಗ ವಾಹನ ಸವಾರರಿಗೆ ಉಂಟಾಗಿರುವಂತ ಗೊಂದಲ, ಪ್ರಶ್ನೆ ಏನಪ್ಪ ಅಂದ್ರೆ ಹೀಗೆ ಪೊಲೀಸರು ಸೀಜ್ ಮಾಡಿದಂತ ವಾಹನಗಳನ್ನು ಬಿಡಿಸಿಕೊಳ್ಳೋದು ಹೇಗೆ ಎಂಬುದಾಗಿದೆ… ಹಾಗಾದ್ರೆ ಹೇಗೆ ನಿಮ್ಮ ವಾಹನ ಬಿಡಿಸಿಕೊಳ್ಳಬೇಕು ಎನ್ನುವ ಮಾಹಿತಿಗಾಗಿ ಮುಂದೆ ಓದಿ…

- Advertisement -

ಈ ಕುರಿತಂತೆ ಬೆಂಗಳೂರು ನಗರ ಪೊಲೀಸರು ಸಾರ್ವಜನಿಕರ ಉಪಯೋಗಕ್ಕಾಗಿ  ಮಾಹಿತಿ ಬಿಡುಗಡೆ ಮಾಡಿದ್ದು, ನಿಷೇಧಾಜ್ಞೆ ಉಲ್ಲಂಘನೆ ಮಾಡಿದ ವಾಹನದ ಮಾಲೀಕರು, ವಾಹನಗಳನ್ನು ಹಿಂಪಡೆಯಲು, ದಿನಾಂಕ 30-04-2020ರಂದು ಕರ್ನಾಟಕ ಉಚ್ಚ ನ್ಯಾಯಾಲಯವು ನೀಡಿದಂತ ಈ ಕೆಳಗಿನ ಅನ್ವಯ ಬಿಡಿಸಿಕೊಳ್ಳುವಂತೆ ತಿಳಿಸಿದ್ದಾರೆ.

  • ವಾಹನದ ಮಾಲೀಕರು ಪೊಲೀಸ್ ಠಾಣೆಯ ಠಾಣಾಧಿಕಾರಿಗೆ ವಾಹನವನ್ನು ಬಿಡುಗಡೆ ಮಾಡಲು ಅರ್ಜಿ ಸಲ್ಲಿಸಬೇಕು ( ನಮೂನೆ-1ರಂತೆ)
  • ಸಂಚಾರಿ ಪೊಲೀಸ್ ಠಾಣೆಯಲ್ಲಿ ಸದರಿ ವಾಹನದ ಮೇಲೆ ಯಾವುದಾದರೂ ಸಂಚಾರ ಉಲ್ಲಂಘನೆ ಪ್ರಕರಣಗಳು ಇರದ ಬಗ್ಗೆ ಸಂಬಂಧಪಟ್ಟ ಸಂಚಾರಿ ಠಾಣಾಧಿಕಾರಿಯಿಂದ ಖಾತರಿ ಪಡಿಸಿಕೊಳ್ಳತಕ್ಕದ್ದು.
  • ಪ್ರಕರಣದ ಆಪಾದಿತನಿಗೆ ಡಿಎಲ್ ಇದ್ದ ಬಗ್ಗೆ ದಾಖಲಾತಿ ದೃಢೀಕರಿಸಿ ಪಡೆದುಕೊಳ್ಳತಕ್ಕದ್ದು.
  • ಠಾಣಾಧಿಕಾರಿಗೆ ವಾಹನದ ಆರ್ ಸಿ, ಐಸಿ ಪರಿಶೀಲಿಸಿದ ನಂತ್ರ, ಅದರ ದೃಢೀಕೃತ ಪ್ರತಿಗಳನ್ನು ಸಲ್ಲಿಸಬೇಕು.
  • ಕ್ರಮ ಸಂಖ್ಯೆ 3 ಮತ್ತು 4ರಲ್ಲಿ ದಾಖಲೆಗಳು ಇಲ್ಲದೇ ಇದ್ದಲ್ಲಿ ಕ್ಷೇತ್ರಿಯ ಸಂಚಾರ ಪೊಲೀಸ್ ಠಾಣೆಯಲ್ಲಿ ದಂಡ ಪಾವತಿಸಬೇಕು.
  • ವಾಹನದ ಇಂಜಿನ್ ನಂಬರ್ ಅನ್ನು ಆರ್ ಸಿ ಪುಸ್ತಕದಲ್ಲಿರುವ ನಂಬರ್ ಗೆ ತಾಳೆ ಇದ್ಯಾ ಅಂತ ಚೆಕ್ ಮಾಡುವುದು.
  • ವಾಹನದ ನೊಂದಣಿ ಸಂಖ್ಯೆಯನ್ನು govi.inರಲ್ಲಿ ಯಾವುದಾದರೂ ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಪರಿಶೀಲನೆ
  • ದ್ವಿ ಚಕ್ರ ವಾಹನದ ಮಾಲೀಕರು ರೂ.500, ನಾಲ್ಕು ಚಕ್ರ ವಾಹನದ ಮಾಲೀಕರು ರೂ.1,000ಗಳನ್ನು ಡೆಪಾಸಿಟ್ ಮಾಡಬೇಕು.
  • ಹಣ ಜಮಾ ಮಾಡಿದವರು ನಮೂನೆ-3ರಂತೆ ರಶೀದಿ ಪಡೆಯೋದು ಮರೆಯಬೇಡಿ.
  • ಇಂಡಿಮಿನಿಟ್ ಬಾಂಡ್ (ನಮೂನೆ-2ರಂತೆ) ಸಲ್ಲಿಸಿ. ಇದರಲ್ಲಿ ಈ ರೀತಿ ಯಾವುದೇ ಉಲ್ಲಂಘನೆಗಳನ್ನು ನಾನು ಮತ್ತೆ ಮಾಡದೇ ಇರಲು ಬದ್ಧನಾಗಿರುತ್ತೇನೆಂದು ಬರೆದು ಸಲ್ಲಿಸುವುದು.
  • ಈ ಬಾಂಡ್ ಗೆ ಪಾಸ್ ಪೋರ್ಟ್ ಸೈಜ್ ಪೋಟೋಗಳನ್ನು ಅಂಟಿಸುವುದು.
  • ವಾಹನದ ಮಾಲೂಕರು, ವಾಹನ ಸ್ವೀಕರಿಸುವವರು ವಾಹನ ಪಡೆಯುವಾಗ ಆಧಾರ್ ಕಾರ್ಡ್ ಪ್ರತಿ, ಮೊಬೈಲ್ ಸಂಖ್ಯೆ ನೀಡುವುದು.
  • ವಾಹನ ಪಡೆಯುವಾಗ, ಪೊಲೀಸರು ತಿಳಿಸುವಂತ ಪೊಲೀಸ್ ಠಾಣೆಯಲ್ಲಿನ ವಾಹನ ಬಿಡುಗಡೆ ಸ್ವೀಕೃತಿ ರಿಜಿಸ್ಟ್ರರ್ ನಲ್ಲಿ ಎಲ್ಲಾ ವಿವರ ನಮೂದಿಸಿ, ಸಹಿ ಮಾಡುವುದು.

ಈ ರೀತಿಯ ಮೇಲಿನ ಕ್ರಮಗಳನ್ನು ಅನುಸರಿಸುವ ಮೂಲಕ, ನೀವು ಲಾಕ್ ಡೌನ್ ಸಂದರ್ಭದಲ್ಲಿ ಸೀಜ್ ಆದಂತಹ ನಿಮ್ಮ ವಾಹನವನ್ನು ಮತ್ತೆ ಬಿಡುಗಡೆ ಮಾಡಿಕೊಳ್ಳಬಹುದಾಗಿದೆ.

Join Whatsapp