ದೆಹಲಿಯ ಚಾಚಾ ನೆಹರು ಆಸ್ಪತ್ರೆಗೆ ಬಾಂಬ್ ಬೆದರಿಕೆ

Prasthutha|

ದೆಹಲಿ: ಗೀತಾ ಕಾಲೊನಿಯಲ್ಲಿರುವ ಚಾಚಾ ನೆಹರು ಆಸ್ಪತ್ರೆಗೆ ಬಾಂಬ್ ಬೆದರಿಕೆ ಇಮೇಲ್ ಬಂದಿದೆ.

- Advertisement -


ಪೊಲೀಸರು ಆಸ್ಪತ್ರೆಯಲ್ಲಿರುವ ರೋಗಿಗಳನ್ನು ಸ್ಥಳಾಂತರಿಸಿದ್ದಾರೆ, ಮಾಹಿತಿ ಮೇರೆಗೆ ಬಾಂಬ್ ನಿಷ್ಕ್ರಿಯ ದಳ ಚಾಚಾ ನೆಹರು ಆಸ್ಪತ್ರೆಗೆ ತಲುಪಿದೆ. ಆಸ್ಪತ್ರೆ ಆವರಣದಲ್ಲಿ ಬಾಂಬ್ ಬೆದರಿಕೆಯ ಕುರಿತು ತನಿಖೆ ನಡೆಸಲಾಗುತ್ತಿದೆ. ಮಾಹಿತಿ ಪ್ರಕಾರ ಬಾಂಬ್ ಬೆದರಿಕೆ ಇರುವ ಈ ಇಮೇಲ್ ಸಿಬ್ಬಂದಿಗೆ ಬಂದಿದ್ದು, ಅದರಲ್ಲಿ ಆಸ್ಪತ್ರೆಯಲ್ಲಿ ಬಾಂಬ್ ಸ್ಫೋಟಿಸಲಾಗುವುದು ಎಂದು ಬರೆಯಲಾಗಿದೆ.

ಈ ನಿಟ್ಟಿನಲ್ಲಿ ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಚಾಚಾ ನೆಹರು ಮಕ್ಕಳ ಆಸ್ಪತ್ರೆಯ ನಿರ್ದೇಶಕಿ ಡಾ.ಸೀಮಾ ಕಪೂರ್ ಹೇಳುತ್ತಾರೆ. ಸಿಬ್ಬಂದಿ, ವೈದ್ಯರು, ಮಕ್ಕಳು, ರೋಗಿಗಳು ಮತ್ತು ಅಟೆಂಡರ್ಗಳು ಆಸ್ಪತ್ರೆಯಿಂದ ಹೊರಗೆ ಕಳುಹಿಸಲಾಗಿದೆ.

Join Whatsapp