ಬಿಜೆಪಿಗೆ ಆಹಾರವಾದ ಪಿಎಸ್ ಐ ಅಕ್ರಮದ ಕಿಂಗ್ ಪಿನ್ ದಿವ್ಯಾ, ಡಿಕೆಶಿ ಜೊತೆಯಾಗಿ ನಿಂತ ಫೋಟೊ

Prasthutha|

ಬೆಂಗಳೂರು: ರಾಜ್ಯದಲ್ಲಿ ಪಿಎಸ್ ಐ ನೇಮಕಾತಿಯಲ್ಲಿ ನಡೆದಿದ್ದ ಅಕ್ರಮದ ಕಿಂಗ್ ಪಿನ್ ಬಿಜೆಪಿ ನಾಯಕಿ, ದಿವ್ಯಾ ಹಾಗರಗಿ ಜೊತೆ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ನಿಂತಿದ್ದ ಫೋಟೋ ಇದೀಗ ಬಿಜೆಪಿಗೆ ಆಹಾರವಾಗಿದೆ. ಅಕ್ರಮ ಬಯಲಾದ ಬಳಿಕ ಪರಾರಿಯಾಗಿರುವ ದಿವ್ಯಾ ಹಾಗರಗಿ ಮೊದಲು ಗೃಹ ಸಚಿವ ಅರಗ ಜ್ಞಾನೇಂದ್ರ ಬಳಿ ನಿಂತಿದ್ದ ಫೋಟೋ ವೈರಲಾಗಿತ್ತು. ಇದೀಗ ಡಿಕೆಶಿಯೊಂದಿಗೆ ದಿವ್ಯಾ ನಿಂತಿರುವ ಪೋಟೋವನ್ನು ಬಳಸಿ ಬಿಜೆಪಿ ತಿರುಗೇಟು ನೀಡಿದೆ.

- Advertisement -


ಟ್ವೀಟ್ ಮೂಲಕ ಡಿಕೆಶಿ ಮತ್ತು ಪ್ರಿಯಾಂಕ್ ಖರ್ಗೆಯ ವಿರುದ್ಧ ವಾಗ್ದಾಳಿ ನಡೆಸಿರುವ ರಾಜ್ಯ ಬಿಜೆಪಿ, ಪ್ರಿಯಾಂಕ್ ಖರ್ಗೆಯವರೇ, ಪೂರ್ಣ ಸರ್ಕಾರವೇ ದಿವ್ಯಾ ಹಾಗರಗಿ ಅವರ ಜೊತೆಯಿದೆ ಎಂದು ಆಪಾದಿಸಿದ್ದೀರಿ. ಆದರೆ ಇಲ್ಲಿ ನೋಡಿ. ಈ ಚಿತ್ರ ಏನು ಹೇಳುತ್ತದೆ? ಎಷ್ಟೊಂದು ತನ್ಮಯತೆಯಿಂದ ಮಾತನಾಡುತ್ತಿದ್ದಾರೆ. ನಿಮ್ಮ ಪಕ್ಷದ ಯಾರು ಯಾರು ಗೋಡಂಬಿ-ಬಾದಾಮಿ ತಿಂದಿರಬಹುದು ಎಂದು ವಿವರಿಸಬಹುದೇ ಎಂದು ಡಿಕೆಶಿ ಮತ್ತು ದಿವ್ಯಾ ನಿಂತಿರುವ ಫೋಟೊ ಬಳಸಿ ವ್ಯಂಗ್ಯವಾಡಿದೆ.


ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಪಿಎಸ್ ಐ ನೇಮಕ ಹಗರಣ ಕಾಂಗ್ರೆಸ್ ಕೃಪಾಪೋಷಿತರ ನಾಟಕ ಮಂಡಳಿಯ ಟೂಲ್ ಕಿಟ್ ಎಂದು ಸಾರಿ ಸಾರಿ ಹೇಳುವುದಕ್ಕೆ ಸಾಕ್ಷ್ಯ ಇಲ್ಲಿದೆ. ಅಧಿಕಾರದಲ್ಲಿ ಇಲ್ಲದೇ ಇದ್ದರೂ ವ್ಯವಸ್ಥೆಯಲ್ಲಿ ಭ್ರಷ್ಟಾಚಾರವನ್ನು ತುರುಕುವುದಕ್ಕೆ ಕಾಂಗ್ರೆಸ್ ನಾಯಕರಿಗೆ ಮಾತ್ರ ಸಾಧ್ಯ ಎಂದು ಕಿಡಿಕಾರಿದೆ.

- Advertisement -


ಈ ಮೊದಲು ಪ್ರಕರಣದಲ್ಲಿ ಗೃಹ ಸಚಿವ ಆರಗ ಜ್ಞಾನೇಂದ್ರ ಜತೆಗಿರುವ ಹಾಗರಗಿ ಫೋಟೋ ತೀವ್ರ ಚರ್ಚೆಗೆ ಎಡೆಮಾಡಿಕೊಟ್ಟಿತ್ತು. ಇದೇ ಫೋಟೋ ಆಧಾರದಲ್ಲಿ ಗೃಹ ಸಚಿವರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹಿಸಿತ್ತು.

Join Whatsapp