‘ತೇಜಸ್ವಿ ಸೂರ್ಯರನ್ನು ಬಿಜೆಪಿಯಿಂದ ಕಿತ್ತೆಸೆಯಿರಿ’ : ಸಂಸದ ಸೂರ್ಯ ವಿರುದ್ದ ಡಿಕೆಶಿ ಗರಂ

Prasthutha|

► ‘ಬೆಂಗಳೂರು ಉಗ್ರರ ಕೇಂದ್ರ’ ಹೇಳಿಕೆಗೆ ಪ್ರತಿಕ್ರಿಯೆ

‘ಬೆಂಗಳೂರು ಉಗ್ರರ ತಾಣ’ ಎಂದು ಅಮಿತ್ ಶಾ ಅವರಿಗೆ ನೀಡಿದ್ದ ಮನವಿಯಲ್ಲಿ ಹಾಗೂ ತನ್ನ ಟ್ವೀಟಿನಲ್ಲಿ ಉಲ್ಲೇಖಿಸಿದ್ದ ಸಂಸದ ತೇಜಸ್ವಿ  ಸೂರ್ಯ ಅವರ ಹೇಳಿಕೆಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿರುವ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಬೆಂಗಳೂರನ್ನು ಉಗ್ರರ ತಾಣ ಎನ್ನುವ ಮೂಲಕ ಸಂಸದ ಸೂರ್ಯ GDPಯ ವೃದ್ಧಿಗೆ ಕೊಡಲಿ ಪೆಟ್ಟು ನೀಡುತ್ತಿದ್ದಾರೆ. ಸಂಸದರು ಈ ರೀತಿ ಹೇಳಿಕೆ ನೀಡಿದರೆ ಬೆಂಗಳೂರಿನಲ್ಲಿ ಯಾರು ಬಂದು ಬಂಡವಾಳ ಹೂಡುತ್ತಾರೆ? ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ಮೋದಿಯವರು ಇದಕ್ಕುತ್ತರಿಸುತ್ತಾರೆಯೇ? ಎಂದು ಪ್ರಶ್ನಿಸಿದ ಡಿಕೆಶಿ,  “ಅವರನ್ನು ಬಿಜೆಪಿಯಿಂದ ವಜಾ ಮಾಡಿ. ಅವರು ತೇಜಸ್ವಿ ಸೂರ್ಯ ಅಲ್ಲ, ಅಮವಾಸ್ಯೆ ಸೂರ್ಯ” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಜಗತ್ತು ನಮ್ಮ ದೇಶದೊಂದಿಗೆ ಬೆಂಗಳೂರನ್ನೂ ಗಮನಿಸುತ್ತಿದೆ. ಪ್ರಪಂಚದ ಹಲವು ದೇಶಗಳಿಗೆ ಇಂಜಿನಿಯರ್​ ಕೊಟ್ಟಿರುವ ನಗರ ಬೆಂಗಳೂರು. ಐಟಿ ಹಬ್​ ಆಗಿ ಜನರಿಗೆ ಪರಿಚಿತವಾಗಿರುವ ನಗರದ ಕುರಿತು ಈ ರೀತಿಯ ಹೇಳಿಕೆ ಸರಿಯಲ್ಲವೆಂದು ಅವರು ಹೇಳಿದ್ದಾರೆ. ಕರ್ನಾಟಕವನ್ನು ಭಯೋತ್ಪಾದಕರ ತಾಣ ಎನ್ನುವ ಮೂಲಕ ಅವರು ಕನ್ನಡಿಗರನ್ನು ಅವಮಾನಿಸಿದ್ದಾರೆ. ಬೆಂಗಳೂರಿನ ಸಂಸದರೇ ತನ್ನ ನಗರದ ಕುರಿತು ಈ ರೀತಿ ಹೇಳಿಕೆ ನೀಡುವುದು ಸ್ವೀಕಾರಾರ್ಹವಲ್ಲ.  ಈ ಕುರಿತು ಅವರು ಕನ್ನಡಿಗರ ಕ್ಷಮೆಯಾಚಿಸಬೇಕು ಎಂದು ಡಿಕೆಶಿ ಆಗ್ರಹಿಸಿದ್ದಾರೆ.

- Advertisement -