‘ಬೆಂಗಳೂರು ಉಗ್ರರ ಕೇಂದ್ರ’ । ತೇಜಸ್ವಿ ಸೂರ್ಯ ವಿವಾದಾತ್ಮಕ ಹೇಳಿಕೆ

Prasthutha|

ಬೇಜವಬ್ದಾರಿಯುತ ಮತ್ತು ವಿವಾದಾತ್ಮಕ ಹೇಳಿಕೆಗಳಿಗೆ ಕುಖ್ಯಾತಿ ಪಡೆದಿರುವ ನೂತನ ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ  ಹಾಗೂ ಸಂಸದ ತೇಜಸ್ವಿ ಸೂರ್ಯ ಮತ್ತೊಮ್ಮೆ ವಿವಾದದ ಕೇಂದ್ರ ಬಿಂದುವಾಗಿದ್ದಾರೆ.  ಗೃಹ ಸಚಿವ ಅಮಿತ್ ಶಾ ಅವರಿಗೆ ಇತ್ತೀಚೆಗೆ ಮನವಿಯೊಂದನ್ನು ನೀಡಿದ್ದ ಸೂರ್ಯ, “ಬೆಂಗಳೂರು ಉಗ್ರರ ಕಾರಸ್ಥಾನವಾಗಿದೆ. ಆದುದರಿಂದ ಎನ್ ಐ ಎಯ ಶಾಶ್ವತ ವಿಭಾಗೀಯ ಕೇಂದ್ರವೊಂದನ್ನು ಬೆಂಗಳೂರಿನಲ್ಲಿ ನಿರ್ಮಿಸಬೇಕು” ಎಂದು ಮನವಿಯಲ್ಲಿ ಆಗ್ರಹಿಸಿದ್ದರು. ಈ ಕುರಿತು ತನ್ನ ಟ್ವೀಟಿನಲ್ಲಿ ಕೂಡಾ ಉಲ್ಲೇಖಿಸಿದ್ದರು. ಇದು ವಿವಾದದ ಕಿಡಿ ಹೊತ್ತಿಸಿದೆ.

- Advertisement -

ಸೂರ್ಯ ಅವರ ಮನವಿಯಲ್ಲಿನ ಹೇಳಿಕೆ ಹಾಗೂ ಟ್ವೀಟ್ ಖಂಡಿಸಿ ಟ್ವಿಟ್ಟರಿಗರು ನಿನ್ನೆ #ApologiseTejasvi ಎಂಬ ಹ್ಯಾಶ್ ಟ್ಯಾಗ್ ನೊಂದಿಗೆ ಖಂಡನಾ ಅಭಿಯಾನವೊಂದನ್ನು ಹಮ್ಮಿಕೊಂಡಿದ್ದರು. ಇದರಲ್ಲಿ ಹಲವು ಟ್ವಿಟ್ಟರಿಗರು ಸೂರ್ಯ ಅವರ ವಿವೇಕರಹಿತ ಹೇಳಿಕೆಯನ್ನು ಖಂಡಿಸಿದ್ದರು. ಮಾತ್ರವಲ್ಲ ಸೂರ್ಯ ಅವರು ಇವತ್ತು ಏನಾಗಿದ್ದಾರೋ ಅದಕ್ಕೆ ಈ ಬೆಂಗಳೂರೇ ಕಾರಣ, ಅದನ್ನು ಅವರು ಮರೆಯಬಾರದು ಎಂದು ಕಿವಿ ಹಿಂಡಿದ್ದರು.

ಪಕ್ಷದಲ್ಲಿನ ತನ್ನ ವರ್ಚಸ್ಸನ್ನು ಹೆಚ್ಚಿಸಲು ಮತ್ತು ಹಿರಿಯ ನಾಯಕರ ಮನವೊಲಿಸಲು ಈ ಯುವ ಸಂಸದ ಅಡ್ಡ ದಾರಿಯನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎಂದು ಹಲವರು ಟೀಕಿಸಿದ್ದಾರೆ. ವಿವಾದಗಳಿಗಾಗಿಯೇ ಕುಖ್ಯಾತಿ ಹೊಂದಿರುವ ಸೂರ್ಯ ಅವರು ಈ ಹಿಂದೆ ಸಿಎಎ ಪ್ರತಿಭಟನೆಕಾರರನ್ನು ಟೀಕಿಸುವ ಭರದಲ್ಲಿ ‘ಎದೆ ಸೀಳಿದರೆ ಎರಡಕ್ಷರ ಇರಲ್ಲ, ಪಂಕ್ಚರ್ ಹಾಕುವವರು’ ಎಂದೆಲ್ಲಾ ನಾಲಗೆ ಹರಿಯಬಿಟ್ಟು ವಿವಾದಕ್ಕೊಳಗಾಗಿದ್ದರು

Join Whatsapp