ಹತ್ಯೆಯಾದ ಫಾಝಿಲ್ ಮನೆಗೆ ಇನ್ನೂ ಭೇಟಿ ನೀಡದ ಜಿಲ್ಲಾಧಿಕಾರಿ, ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್: ಎಸ್.ಡಿ.ಪಿ.ಐ ತೀವ್ರ ಆಕ್ರೋಶ

Prasthutha|

ಮೂಡಬಿದ್ರೆ: ಆರೆಸ್ಸೆಸ್ ಸಹ ಸಂಘಟನೆ ಬಜರಂಗದಳದ ಗೂಂಡಾಗಳ ದುಷ್ಕ್ರತ್ಯಕ್ಕೆ ಬಲಿಯಾದ ಫಾಝಿಲ್ ಹತ್ಯೆಯಾಗಿ ವಾರ ಕಳೆದರೂ ಜಿಲ್ಲಾಡಳಿತ ಮತ್ತು ಕ್ಷೇತ್ರದ ಶಾಸಕ ಉಮಾನಾಥ್ ಕೋಟ್ಯಾನ್ ಸಂತ್ರಸ್ತರ ಮನೆಗೆ ಭೇಟಿ ಕೊಟ್ಟಿಲ್ಲ ಎಂದು ಎಸ್.ಡಿ.ಪಿ.ಐ ಮೂಡಬಿದ್ರೆ ವಿಧಾನಸಭಾ ಕ್ಷೇತ್ರಾದ್ಯಕ್ಷ ಆಸಿಫ್ ಕೋಟೆಬಾಗಿಲು ಆಕ್ರೋಶ ವ್ಯಕ್ತಪಡಿಸಿದ್ದಾರೆ.

- Advertisement -

ಪ್ರವೀಣ್ ಹತ್ಯೆಯಾದಾಗ ರಾತ್ರೋರಾತ್ರಿ ಮನೆಗೆ ಭೇಟಿ ಕೊಟ್ಟ ಜಿಲ್ಲಾಧಿಕಾರಿಗಳು ವಾರವೊಂದು ಕಳೆದರೂ ಫಾಝಿಲ್ ಕುಟುಂಬವನ್ನು ಭೇಟಿಯಾಗಿ ಸಾಂತ್ವನ ಹೇಳದಿರುವುದು ಖೇಧಕರ. ಸಂವಿಧಾನ ಬಧ್ಧವಾಗಿ ಕರ್ತವ್ಯ ನಿರ್ವಹಿಸಬೇಕಾದ ಜಿಲ್ಲಾ ದಂಡಾಧಿಕಾರಿಗಳೂ ಕೇವಲ ಒಂದೇ ಧರ್ಮದ ರಾಯಭಾರಿಯಂತೆ ವರ್ತಿಸುತ್ತಿದ್ದಾರೆಯೇ ಎಂದು ಆಸಿಫ್ ಕೋಟೆಬಾಗಿಲು ಪ್ರಶ್ನಿಸಿದ್ದಾರೆ.

ಮೂಡಬಿದ್ರೆ ವಿಧಾನಸಭಾ ಕ್ಷೇತ್ರದ ಶಾಸಕ, ಉಮಾನಾಥ್ ಕೋಟ್ಯಾನ್ ಕೂಡ ಸಂತ್ರಸ್ತರ ಮನೆಗೆ ಭೇಟಿ ಕೊಡದೆ ಇರುವುದು ಎಲ್ಲಾ ವರ್ಗದ ನಾಗರಿಕರಿಗೂ ಸಮಾನ ಹಕ್ಕುಗಳನ್ನು ಕೊಟ್ಟಂತಹ ,ಸಮ ಸಮಾಜದ ಸಂದೇಶವನ್ನು ಖಾತರಿ ಪಡಿಸಿದಂತಹ ದೇಶದ ಘನತೆವೆತ್ತ ಸಂವಿದಾನದ ಆಶಯಗಳನ್ನು ಗಾಳಿಗೆ ತೂರಿದಂತೆ ಕಾಣುತ್ತದೆ. ಶಾಸಕರಾದವರು ಯಾವುದೇ ದ್ವೇಷ, ಅಸೂಯೆ, ತಾರತಮ್ಯ ಮಾಡದೆ ಕ್ಷೇತ್ರದ ಜನತೆಗೆ ನ್ಯಾಯ ಒದಗಿಸುತ್ತೇನೆ ಎಂದು ಹೇಳಿದ ಪ್ರತಿಜ್ಞೆಯನ್ನು ಮರೆತರೇ ಎಂದು ಆಸಿಫ್ ಟೀಕಿಸಿದ್ದಾರೆ.

- Advertisement -

ಇದೇ ಶಾಸಕರು ಹಿಂದೊಮ್ಮೆ ಮೂಡಬಿದ್ರೆಯಲ್ಲಿ ಅನೈತಿಕ ಪೊಲೀಸ್ ಗಿರಿ ಮಾಡಿ ಪೊಲೀಸರಿಂದ ಬಂಧನಕ್ಕೆ ಒಳಗಾದ ಹಿಂದುತ್ವವಾದಿ ಗೂಂಡಾಗಳ ಪರವಾಗಿ ನಿಂತು ಅವರ ಮೇಲೆ ಹಾಕಿದ ಯಾವುದೇ ಸೆಕ್ಷನ್ ಗಳನ್ನು ಲೆಕ್ಕಿಸದೆ ರಾತ್ರೋರಾತ್ರಿ ಠಾಣೆಯಿಂದಲೇ ಬಿಡಿಸಿಕೊಂಡು ಹೋಗಿರುವುದನ್ನು ನೋಡಿದರೆ ಇವರಿಗೆ ಜಿಲ್ಲೆಯಲ್ಲಿ ಶಾಂತಿ, ಅಭಿವ್ರದ್ಧಿ ಮುಖ್ಯವಲ್ಲ, ಕೇವಲ ಗೂಂಡಾಯಿಸಂ, ಹಲ್ಲೆ, ಕೊಲೆಗೆ ಬೆಂಬಲ ಕೊಡುವ ಉಧ್ದೇಶ ಮಾತ್ರ ಕಾಣುತ್ತಿದೆ, ದೂರದ ಸುಳ್ಯ ಕ್ಷೇತ್ರದಲ್ಲಿ ಕೊಲೆಯಾದವರ ಮನೆಗೆ ಭೇಟಿ ನೀಡುವ ಶಾಸಕರು ತನ್ನದೇ ಕ್ಷೇತ್ರದಲ್ಲಿ ನಡೆದ ಕೊಲೆಯ ಬಗ್ಗೆ ಮಾತನಾಡದೆ ಸುಮ್ಮನಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಕ್ಷೇತ್ರದ ಅಭಿವೃದ್ಧಿ ಮಾಡದೇ, ಕೇವಲ ಧರ್ಮದ ಹೆಸರಿನಲ್ಲಿ ತಾರತಮ್ಯ ಮಾತ್ರ ಮಾಡಿ ತನ್ನ ಓಟ್ ಬ್ಯಾಂಕ್ ಭಧ್ರ ಪಡಿಸುವ ಇವರು ಯಾವುದೇ ಕಾರಣಕ್ಕೂ ಶಾಸಕರಾಗಿ ಮುಂದುವರಿಯುವುದು ಪ್ರಜಾಪ್ರಭುತ್ವಕ್ಕೆ ಅಪಚಾರ ಮತ್ತು ಅಪಾಯವಾಗಿದೆ . ಆದುದರಿಂದ ಶಾಸಕರು ತನ್ನ ಸ್ಥಾನಕ್ಕೆ ಕೂಡಲೇ ರಾಜಿನಾಮೆ ಕೊಡಬೇಕೆಂದು SDPI ಒತ್ತಾಯ ಮಾಡಿದೆ.

ಜಿಲ್ಲಾಡಳಿತ ಮತ್ತು ಜನಪ್ರತಿನಿಧಿಗಳು ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ಪ್ರಜಾಸತ್ತಾತ್ಮಕ ರೀತಿಯ ಭಾರಿ ಪ್ರತಿಭಟನೆಗಳನ್ನು ಎದುರಿಸಬೇಕಾಗುತ್ತದೆ ಎಂದು ಆಸಿಫ್ ಕೋಟೆಬಾಗಿಲು ಎಚ್ಚರಿಸಿದ್ದಾರೆ.

ಕೂಡಲೇ ಕೊಲೆಯಾದ ಫಾಝಿಲ್ ಮನೆಗೆ ಜಿಲ್ಲಾಧಿಕಾರಿ ಮತ್ತು ಮೂಡಬಿದ್ರೆ ಕ್ಷೇತ್ರದ ಶಾಸಕರು ಭೇಟಿಕೊಡಬೇಕು, ಮತ್ತು ಸರಕಾರದಿಂದ ಸೂಕ್ತವಾದ ಪರಿಹಾರವನ್ನು ಒದಗಿಸುವ ಮೂಲಕ ರಾಜಧರ್ಮವನ್ನು ಪಾಲಿಸಬೇಕೆಂದು ಆಸಿಫ್ ಕೋಟೆಬಾಗಿಲು ಪ್ರಕಟಣೆಯಲ್ಲಿ ಒತ್ತಾಯಿಸಿದರು.

Join Whatsapp