ಗಾಝಾ ಪಟ್ಟಣದ ಮೇಲೆ ವೈಮಾನಿಕ ದಾಳಿ ನಡೆಸಿದ ಇಸ್ರೇಲ್: ಬಾಲಕಿ ಸಹಿತ ಕನಿಷ್ಠ 8 ಮಂದಿ ಮೃತ್ಯು

Prasthutha|

ಗಾಝಾ/ ಫೆಲೆಸ್ತೀನ್: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆಯು ವೈಮಾನಿಕ ದಾಳಿ ನಡೆಸಿದ್ದು, ಈ ದಾಳಿಯಲ್ಲಿ ಓರ್ವ ಬಾಲಕಿ ಸಹಿತ 8 ಮಂದಿ ಮೃತಪಟ್ಟಿದ್ದಾರೆಂದು ಅಲ್ ಜಝೀರಾ ವರದಿ ಮಾಡಿದೆ.

- Advertisement -

ಈ ದಾಳಿಯ ಬಗ್ಗೆ ಖುದ್ದು ಇಸ್ರೇಲ್ ಸೇನೆಯೇ ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ (ಇಸ್ರೆಲ್ ಡಿಫೆನ್ಸ್ ಫೋರ್ಸೆಸ್) ಮಾಹಿತಿ ಹಂಚಿಕೊಂಡಿದ್ದು, ಗಾಝಾ ಪಟ್ಟಿಯ ಮೇಲೆ ವಾಯು ದಾಳಿ ನಡೆಸಲಾಗಿದ್ದು, ಇಸ್ರೇಲಿ ಹೋಮ್ ಫ್ರಂಟ್‌ನಲ್ಲಿ ವಿಶೇಷ ಪರಿಸ್ಥಿತಿಯನ್ನು ಘೋಷಿಸಲಾಗಿದೆ ಎಂದಿದೆ.

ಅಲ್ಲದೆ, ದಾಳಿಯಲ್ಲಿ ಅಲ್-ಕುದ್ಸ್ ಬ್ರಿಗೇಡ್‌ನ ಕಮಾಂಡರ್ ತೈಸಿರ್ ಅಲ್-ಜಬಾರಿ ಕೂಡಾ ಮೃತಪಟ್ಟಿದ್ದು, ದಾಳಿಯು ಇವರು ನೆಲೆಸಿದ್ದ ಅಪಾರ್ಟ್ ಮೆಂಟ್‌ನ್ನು ಗುರಿಯಾಗಿಸಿ ನಡೆದಿತ್ತು.

- Advertisement -

ಕಮಾಂಡರ್ ಅಲ್-ಜಬಾರಿ ಮತ್ತು ಐದು ವರ್ಷದ ಬಾಲಕಿ ಸೇರಿದಂತೆ ಕನಿಷ್ಠ ಏಳು ಜನರು ಸಾವನ್ನಪ್ಪಿದ್ದಾರೆ ಎಂದು ಗಾಜಾದ ಆರೋಗ್ಯ ಸಚಿವಾಲಯ ತಿಳಿಸಿದ್ದು, ದಾಳಿಯ ಪರಿಣಾಮವಾಗಿ ಕನಿಷ್ಠ 44 ಜನರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಮಾಹಿತಿ ನೀಡಿದೆ.

ಈ ವಾರದ ಆರಂಭದಲ್ಲಿ ಅಲ್ ಕುದ್ಸ್ ಬ್ರಿಗೇಡ್‌ನ ಹಿರಿಯ ಸದಸ್ಯನನ್ನು ಇಸ್ರೇಲಿ ಸೇನೆ ಬಂಧಿಸಿದ ಬಳಿಕ ಗಾಝಾದ ವಾತಾವರಣ ಕಲುಷಿತಗೊಂಡಿತ್ತು. ಅಲ್ಲದೇ ಇಸ್ರೇಲ್ ಗಾಝಾಕೆ ಸಂಪರ್ಕ ಕಲ್ಪಿಸುವ ತನ್ನ ಎರಡು ಗಡಿಗಳನ್ನು ಮುಚ್ಚಿದ್ದಲ್ಲದೇ, ಈ ಗಡಿಯಲ್ಲಿ ವಾಸಿಸುವ ಇಸ್ರೇಲ್ ಜನತೆಯ ಚಲನವಲನದ ಮೇಲೂ ಕೆಲ ನಿರ್ಬಂಧ ವಿಧಿಸಿತ್ತು. ಇದಾದ ಕೆಲವೇ ದಿನಗಳಲ್ಲಿ ಈ ದಾಳಿ ನಡೆದಿದೆ.

Join Whatsapp