ಸಂಚಾರ ನಿಯಮ ಉಲ್ಲಂಘನೆಯ ದಂಡದ ಮೇಲೆ ರಿಯಾಯಿತಿ: ಬೆಂಗಳೂರಿನಲ್ಲಿ ನಾಲ್ಕೇ ದಿನದಲ್ಲಿ 25 ಕೋಟಿ ರೂ. ಸಂಗ್ರಹ

Prasthutha|

ಬೆಂಗಳೂರು: ಸಂಚಾರ ನಿಯಮ ಉಲ್ಲಂಘನೆಯ ಮೇಲೆ ವಿಧಿಸಿದ ದಂಡ ಮೇಲೆ ಸಾರಿಗೆ ಇಲಾಖೆ ವಿಶೇಷ ರಿಯಾಯಿತಿ ಘೋಷಿಸಿದ್ದರಿಂದ ಕಳೆದ ನಾಲ್ಕು ದಿನಗಳಲ್ಲಿ ಬೆಂಗಲೂರು ಸಂಚಾರ ಪೊಲೀಸರು 25.42 ಕೋಟಿ ರೂ. ಸಂಗ್ರಹಿಸಿದ್ದಾರೆ.

ನಾಲ್ಕು ದಿನಗಳಲ್ಲಿ ಒಟ್ಟು 7,41,048 ಟ್ರಾಫಿಕ್ ಉಲ್ಲಂಘನೆ ಪ್ರಕರಣಗಳನ್ನು ಇತ್ಯರ್ಥ ಪಡಿಸಿ 25.42 ಕೋಟಿ ರೂ. ಸಂಗ್ರಹಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

- Advertisement -

ಶುಕ್ರವಾರ ಸುಮಾರು 5.6 ಕೋಟಿ ರೂ., ಶನಿವಾರ 8 ಕೋಟಿ ರೂ.ಗೂ ಹೆಚ್ಚು ಮೊತ್ತ ಸಂಗ್ರಹವಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ದಂಡ ಪಾವತಿಸುವವರು ದೈಹಿಕವಾಗಿ ಪೊಲೀಸ್ ಠಾಣೆಗಳಿಗೆ ಭೇಟಿ ನೀಡುವ ಅಗತ್ಯವಿಲ್, ಸಾರ್ವಜನಿಕರು ಆನ್’ಲೈನ್’ನಲ್ಲಿಯೂ ದಂಡ ಪಾವತಿಸಬಹುದು ಎಂದು ಜಂಟಿ ಪೊಲೀಸ್ ಆಯುಕ್ತ (ಸಂಚಾರ) ಎಂಎನ್ ಅನುಚೇತ್ ತಿಳಿಸಿದ್ದಾರೆ.

ಕಾನೂನು ಉಲ್ಲಂಘಿಸಿದವರು ದಂಡವನ್ನು ಪಾವತಿಸಲು ಸಂಚಾರ ಪೊಲೀಸ್ ಠಾಣೆಗಳು ಅಥವಾ ಸಂಚಾರ ನಿರ್ವಹಣಾ ಕೇಂದ್ರಗಳಿಗೆ ಭೇಟಿ ನೀಡಬಹುದು. PayTM ಅಥವಾ ಕರ್ನಾಟಕ ಒನ್ ವೆಬ್’ಸೈಟ್ ಅನ್ನು ಬಳಸಬಹುದು.

- Advertisement -