ಕುಟುಂಬ ಸದಸ್ಯರ ಮುಂದೆಯೇ ಬಿಜೆಪಿ ನಾಯಕನ ಬರ್ಬರ ಹತ್ಯೆ

Prasthutha|

ರಾಯ್ ಪುರ: ಬಿಜೆಪಿ ನಾಯಕನನ್ನು ಮಾವೋವಾದಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ ಘಟನೆ ಛತ್ತೀಸ್’ಗಢದ ಬಿಜಾಪುರದಲ್ಲಿ ನಡೆದಿದೆ.

- Advertisement -


ಬಿಜೆಪಿ ಮುಖಂಡ ನೀಲಕಂಠ ಕೊಲೆಗೀಡಾದ ವ್ಯಕ್ತಿ. ಮನೆಗೆ ನುಗ್ಗಿದ ಮಾವೋವಾದಿಗಳು ಕುಟುಂಬ ಸದಸ್ಯರ ಮುಂದೆಯೇ ಕೊಲೆ ಮಾಡಿದ್ದಾರೆ.


ಕಳೆದ 15 ವರ್ಷಗಳಿಂದ ಬಿಜೆಪಿಯ ಉಸೂರ್ ಬ್ಲಾಕ್ ಅಧ್ಯಕ್ಷರಾಗಿದ್ದ ನೀಲಕಂಠ ಅವರು ಪೈಕ್ರಂ ನ ತನ್ನ ಗ್ರಾಮದಲ್ಲಿ ನಡೆದ ಮದುವೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾಗ ಹಲ್ಲೆ ನಡೆಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಸಿಪಿ) ಚಂದ್ರಕಾಂತ್ ಗೌರನಾ ತಿಳಿಸಿದ್ದಾರೆ.

- Advertisement -


ಕೊಡಲಿ ಮತ್ತು ಇತರ ಹರಿತವಾದ ಆಯುಧಗಳಿಂದ ಮಾವೋವಾದಿಗಳು ಮಾಡಿದ ದಾಳಿಗೆ ನೀಲಕಂಠ ಅವರು ಕುಸಿದು ಬಿದ್ದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. 150 ಕ್ಕೂ ಹೆಚ್ಚು ಶಸ್ತ್ರ ಸಜ್ಜಿತ ಮಾವೋವಾದಿಗಳು ಗ್ರಾಮಕ್ಕೆ ಬಂದಿದ್ದರು, ಆದರೆ ಅವರಲ್ಲಿ ಮೂವರು ಮಾತ್ರ ಬಿಜೆಪಿ ನಾಯಕನ ಮನೆಗೆ ಭೇಟಿ ನೀಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಘಟನೆಯ ಬಗ್ಗೆ ತನಿಖೆ ಪ್ರಗತಿಯಲ್ಲಿದೆ ಎಂದು ಎಸಿಪಿ ತಿಳಿಸಿದ್ದಾರೆ.


ಮೂವರು ವ್ಯಕ್ತಿಗಳು ನೀಲಕಂಠನನ್ನು ಬಲವಂತವಾಗಿ ಮನೆಯಿಂದ ಹೊರಗೆ ಕರೆದೊಯ್ದು, ಕುಟುಂಬ ಸದಸ್ಯರು ಮತ್ತು ಸ್ಥಳೀಯರ ಮುಂದೆ ಕ್ರೂರವಾಗಿ ಹತ್ಯೆಗೈದು ಪರಾರಿಯಾಗಿದ್ದಾರೆ ಎಂದು ನೀಲಕಂಠ ಅವರ ಪತ್ನಿ ಲಲಿತಾ ಹೇಳಿದ್ದಾರೆ.

Join Whatsapp