ಅಲ್- ಅಕ್ಸಾ ಮಸೀದಿ ಬಳಿ ಫೆಲೆಸ್ತೀನಿಯನ್ನರನ್ನು ಗುರಿಯಾಗಿಸಿ ಇಸ್ರೇಲ್ ಪಡೆಯಿಂದ ದಾಳಿ: 20 ಮಂದಿಗೆ ಗಾಯ

Prasthutha|

ಜೆರುಸಲೇಂ: ಜೆರುಸಲೇಂನ ಪವಿತ್ರ ಸ್ಥಳವಾದ ಅಲ್-ಅಕ್ಸಾ ಮಸೀದಿಯನ್ನು ಗುರಿಪಡಿಸಿ ಇಸ್ರೇಲ್ ಪಡೆಗಳು ಇಂದು ಮುಂಜಾನೆ ದಾಳಿ ನಡೆಸಿದ್ದು ಕನಿಷ್ಠ 20 ಮಂದಿ ಫೆಲೆಸ್ತೀನಿಯನ್ನರು ಗಾಯಗೊಂಡಿದ್ದಾರೆ.

- Advertisement -


ಪವಿತ್ರ ರಮಝಾನ್ ನ ಪ್ರಾರ್ಥನೆಯಲ್ಲಿ ತೊಡಗಿದ್ದ ಫೆಲೆಸ್ತೀನಿಯನ್ನರನ್ನು ಗುರಿಪಡಿಸಿ ಇಸ್ರೇಲಿ ಪೊಲೀಸರು ಹಠಾತ್ತಾಗಿ ಗ್ರೆನೇಡ್ ದಾಳಿ ನಡೆಸಿದ್ದಾರೆ ಎಂದು ಅಲ್ ಅಕ್ಸಾ ಇಸ್ಲಾಮಿಕ್ ದತ್ತಿ ಸಂಸ್ಥೆ ತಿಳಿಸಿದೆ. ಇದೇ ವೇಳೆ ಪೊಲೀಸರು ಅಶ್ರುವಾಯು ಸಿಡಿಸುವ ವೀಡಿಯೋಗಳು ವೈರಲ್ ಆಗಿದೆ.

https://twitter.com/Awaited_Hope/status/1514839135890157572


ಇಸ್ರೇಲ್ ದಾಳಿಯಲ್ಲಿ ಗಾಯಗೊಂಡ 20 ಜನರನ್ನು ಆಸ್ಪತ್ರೆಗಳಿಗೆ ದಾಖಲಿಸಿರುವುದಾಗಿ ಫೆಲೆಸ್ತೀನ್ ರೆಡ್ ಕ್ರೆಸೆಂಟ್ ತುರ್ತು ಸೇವೆ ತಿಳಿಸಿದ್ದು, ಸ್ಥಳದಲ್ಲಿದ್ದ ಕಾವಲುಗಾರರೊಬ್ಬರಿಗೆ ರಬ್ಬರ್ ಬುಲೆಟ್ ನಿಂದ ಕಣ್ಣಿಗೆ ಗುಂಡು ಹಾರಿಸಲಾಗಿದೆ ಎಂದು ವರದಿಯಾಗಿದೆ.

Join Whatsapp