ಬೈಕ್ ಗೆ ಡಿಸೇಲ್ ಟ್ಯಾಂಕರ್ ಡಿಕ್ಕಿ; ಓರ್ವ ಸಜೀವ ದಹನ

Prasthutha|

ಹರಪನಹಳ್ಳಿ: ಡೀಸೆಲ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದ ಪರಿಣಾಮ  ಬೈಕ್ ಸವಾರ  ಸಜೀವ ದಹನವಾಗಿರುವ ಘಟನೆ ವಿಜಯಪುರ ಜಿಲ್ಲೆಯ ಹರಪನಹಳ್ಳಿಯಲ್ಲಿ ನಡದಿದೆ.

- Advertisement -

ಹರಪನಹಳ್ಳಿ ರೈಲ್ವೆ ಗೇಟ್ ಬಳಿ ಡೀಸೆಲ್ ಟ್ಯಾಂಕರ್ ಬೈಕ್ ಗೆ ಡಿಕ್ಕಿ ಹೊಡೆದು ಹೊತ್ತಿ ಉರಿದಿದೆ.ಬೈಕ್ ಹಾಗೂ ಡೀಸೆಲ್ ಟ್ಯಾಂಕರ್ ನಡುವೆ ಮುಖಾ ಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯಾಗುತ್ತಿದ್ದಂತೆ ಬೈಕ್ ಸವಾರ ಲಾರಿ ಅಡಿ ಸಿಲುಕಿದ್ದ. ಈ ವೇಳೆ ಬೈಕ್ ಹಾಗೂ ಸವಾರನ ಮೇಲೆ ಡೀಸೆಲ್ ತುಂಬಿದ್ದ ಲಾರಿ ಬಿದ್ದಿದೆ.

ಡಿಸೇಲ್ ಟ್ಯಾಂಕ್ ಓಪನ್ ಆಗಿ ಅವಘಡ ಸಂಭವಿಸಿದೆ. ಬೆಂಕಿ ಬೈಕ್​ಗೆ ತಗುಲುತ್ತಿದ್ದಂತೆ ಲಾರಿಗೂ ವ್ಯಾಪಿಸಿದೆ.ಈ ವೇಳೆ ಬೆಂಕಿಯಿಂದಾಗಿ ಬೈಕ್ ಸವಾರ ಸಜೀವ ದಹನವಾಗಿದ್ದಾರೆ. ಟ್ಯಾಂಕರ್ ಚಾಲಕ ಮಹದೇವಪ್ಪ ವಾಹನದಿಂದ ಹೊರಕ್ಕೆ  ಹಾರಿದ್ದರಿಂದ ಸಣ್ಣಪುಟ್ಟ ಗಾಯಗಳಾಗಿವೆ.

- Advertisement -

ಮೃತ ಬೈಕ್ ಸವಾರನನ್ನು ನಾಗರಾಜ್ (35) ಎಂದು ಗುರುತಿಸಲಾಗಿದೆ. ಹಿಂಬದಿ ಸವಾರ ಚಂದ್ರು ಗೆ ಗಂಭೀರ ಗಾಯಗಳಾಗಿದ್ದು, ದಾವಣಗೆರೆ ಖಾಸಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮೃತದೇಹವನ್ನು ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದೆ.

ಸ್ಥಳಕ್ಕೆ  ಆಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ  ಬೆಂಕಿ ನಂದಿಸುವ ಕಾರ್ಯಾಚರಣೆ ಮಾಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹರಪನಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.

Join Whatsapp