ವಿಮಾನದ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯ ವರ್ತನೆ; ಪ್ರಯಾಣಿಕನ ಬಂಧನ

Prasthutha|

ಹೊಸದಿಲ್ಲಿ:  ಪ್ರಯಾಣದ ಸಂದರ್ಭದಲ್ಲಿ  ವಿಮಾನದ ಮಹಿಳಾ ಸಿಬ್ಬಂದಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಆರೋಪದ ಮೇಲೆ ವ್ಯಕ್ತಿಯೊಬ್ಬನನ್ನು ಬಂಧಿಸಿ, ಬಳಿಕ ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ.

- Advertisement -

ಶ್ರೀನಗರ ಮತ್ತು ಲಖನೌ ನಡುವೆ ಸಂಚರಿಸುತ್ತಿದ್ದ ಇಂಡಿಗೊ ಏರ್‌ಲೈನ್ಸ್‌ ವಿಮಾನದಲ್ಲಿ ಈ ಪ್ರಕರಣ ವರದಿಯಾಗಿದೆ. ಅಮೃತಸರ ಮಾರ್ಗವಾಗಿ ಸಂಚರಿಸುವ ಈ ವಿಮಾನವು ಶ್ರೀನಗರದಿಂದ ಹಾರಾಟ ಆರಂಭಿಸಿದ ಬಳಿಕ, ಉತ್ತರ ಪ್ರದೇಶದ ಪ್ರಯಾಣಿಕ  ಗಗನಸಖಿಯೊಂದಿಗೆ ವಾಗ್ವಾದ ನಡೆಸಿ, ಅಸಭ್ಯವಾಗಿ ವರ್ತಿಸಿದ್ದಾನೆ ಎಂದು  ತಿಳಿದು ಬಂದಿದೆ.

ಈ ವಿಚಾರವನ್ನು ಅಮೃತಸರ ವಿಮಾನ ನಿಲ್ದಾಣದ ಅಧಿಕಾರಿಗಳಿಗೆ ತಿಳಿಸಿದ ಹಿನ್ನೆಲೆಯಲ್ಲಿ, ವಿಮಾನವು ಅಮೃತಸರ ನಿಲ್ದಾಣಕ್ಕೆ ಆಗಮಿಸುವ ಮುನ್ನ ಭದ್ರತಾ ಸಿಬ್ಬಂದಿಯನ್ನು ರನ್‌ವೇ ಬಳಿ ನಿಯೋಜಿಸಲಾಗಿತ್ತು. ವಿಮಾನ ಭೂ ಸ್ಪರ್ಶವಾದ ಬಳಿಕ ಪ್ರಯಾಣಿಕನನ್ನು ಬಂಧಿಸಿ, ಪೊಲೀಸರ ವಶಕ್ಕೆ ನೀಡಲಾಗಿದೆ.

Join Whatsapp