ಮಳೆ ಕಡಿಮೆಯಾದ ಬಳಿಕ ಭೂಕುಸಿತ ಸ್ಥಳಗಳಿಗೆ ವಿಜ್ಞಾನಿಗಳು, ತಜ್ಞರ ಭೇಟಿ: ಉಸ್ತುವಾರಿ ಸಚಿವ ನಾಗೇಶ್

Prasthutha|

ಕೊಡಗು: ಮಳೆ ಕಡಿಮೆಯಾದ ಬಳಿಕ ಭೂಕುಸಿತ, ಬಿರುಕು ಸ್ಥಳಗಳಿಗೆ ವಿಜ್ಞಾನಿಗಳು, ತಜ್ಞರು ಭೇಟಿ ನೀಡಲಿದ್ದಾರೆ ಎಂದು ಕೊಡಗು ಉಸ್ತವಾರಿ ಸಚಿವ ಬಿ.ಸಿ ನಾಗೇಶ್ ತಿಳಿಸಿದ್ದಾರೆ.

- Advertisement -

ಮಳೆ ಹಾನಿ, ಭೂಕುಸಿತ ಸ್ಥಳಗಳಿಗೆ ಭೇಟಿ ನೀಡಿ  ಪರಿಶೀಲಿಸಿದ ಬಳಿಕ ಮಾತನಾಡಿದ ಅವರು, ಭೂಕುಸಿತ, ಜಲಸ್ಫೋಟಕ್ಕೆ ಕಾರಣಗಳ ಬಗ್ಗೆ ವಿಜ್ಞಾನಿಗಳು, ತಜ್ಞರು ಸಮಗ್ರ ಅಧ್ಯಯನ ನಡೆಸಲಿದ್ದಾರೆ

ಜಿಲ್ಲಾಧಿಡಳಿತ ಭವನ ತಡೆಗೋಡೆಗೆ ತಾತ್ಕಾಲಿಕ ದುರಸ್ತಿ ನಡೆಸಲಾಗುತ್ತಿದೆ. ದುರಸ್ತಿ ಪೂರ್ಣವಾಗುವವರೆಗೂ ವಾಹನ ಸಂಚಾರಕ್ಕೆ ಅವಕಾಶವಿಲ್ಲ. ಕಾಮಗಾರಿಯ ನಂತರ ಲಘು ವಾಹನಗಳ ಸಂಚಾರಕ್ಕೆ ಅವಕಾಶ ಮಾಡಲಾಗುವುದು ಎಂದು ತಿಳಿಸಿದರು.

Join Whatsapp