ಮಮತಾ ಬ್ಯಾನರ್ಜಿಯನ್ನು ಹಿಂದಿನಿಂದ ಯಾರೋ ತಳ್ಳಿದ್ರಾ?: ಅನುಮಾನ ಹುಟ್ಟು ಹಾಕಿದ ವೈದ್ಯರ ಹೇಳಿಕೆ

Prasthutha|

ಪಶ್ಚಿಮ ಬಂಗಾಳ: ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಣೆಗೆ ರಕ್ತ ಸಿಕ್ತ ಗಾಯದೊಂದಿಗೆ ದೀದಿ ಎಸ್‌ಎಸ್‌ಕೆಎಂ ಆಸ್ಪತ್ರೆಗೆ ದಾಖಲಾಗಿದ್ದು, ಅವರಿಗೆ ಏನಾಯ್ತು ಎಂದು ಪ್ರಶ್ನೆ ಹುಟ್ಟಿಕೊಂಡಿದೆ. ಈ‌ಮಧ್ಯೆ ಮಮತಾ ಬ್ಯಾನರ್ಜಿ ಆರೋಗ್ಯದ ಬಗ್ಗೆ ಎಸ್‌ಎಸ್‌ಕೆಎಂ ಆಸ್ಪತ್ರೆ ವೈದ್ಯರೇ‌ ನೀಡಿದ ಮಾಹಿತಿ ಅನುಮಾನ ಸೃಷ್ಟಿಸಿದೆ.

- Advertisement -

ಮಮತಾ ಬ್ಯಾನರ್ಜಿಯವರನ್ನು ಹಿಂದಿನಿಂದ ಯಾರೋ ತಳ್ಳಿದ ರೀತಿಯಲ್ಲಿ ಗಾಯವಾಗಿದೆ ಎಂದು ವೈದ್ಯರು ಹೇಳಿದ್ದಾರೆ. ವೈದ್ಯರ ಮಾತಿನಿಂದ ಹಲವು ರೀತಿಯ ಅನುಮಾನ ಶುರುವಾಗಿದೆ.

ಮಮತಾ ಬ್ಯಾನರ್ಜಿ ಆರೋಗ್ಯದ ಕುರಿತಂತೆ ಎಸ್‌ಎಸ್‌ಕೆಎಂ ಆಸ್ಪತ್ರೆಯ ನಿರ್ದೇಶಕ ಡಾ. ಮಣಿಮೋಯ್ ಬಂಡೋಪಾಧ್ಯಾಯ ಮಾಹಿತಿ ನೀಡಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿಯವರು ಇಂದು ಸಂಜೆ 7:30ರ ಸುಮಾರಿಗೆ ನಮ್ಮ ಆಸ್ಪತ್ರೆಗೆ ದಾಖಲಾಗಿದ್ದಾರೆ. ಅವರನ್ನು ಪರಿಶೀಲಿಸಿದಾಗ ಹಿಂದಿನಿಂದ ಕೆಲವು ತಳ್ಳುವಿಕೆಯಿಂದಾಗಿ ಆಗಿರುವ ಗಾಯದ ರೀತಿ ಅವರ ಹಣೆಯ ಮೇಲೆ ಗಾಯವಾಗಿದೆ ಎಂದು ಹೇಳಿದ್ದಾರೆ.

- Advertisement -

ಮಮತಾ ಬ್ಯಾನರ್ಜಿ ಅವರ ಹಣೆಗೆ ಗಾಯವಾಗಿದೆ. ಅವರ ಹಣೆಯ ಮೇಲೆ ಮತ್ತು ಮೂಗಿನ ಮೇಲೆ ತೀಕ್ಷ್ಣವಾದ ಗಾಯವಾಗಿದೆ. ಅವರ ಮನೆಯ ಸಮೀಪ ಬಿದ್ದಿರಬಹುದು. ತೀವ್ರವಾಗಿ ರಕ್ತಸ್ರಾವವಾಗಿದೆ. ಅವರನ್ನು ನಮ್ಮ ಆಸ್ಪತ್ರೆ ನರಶಸ್ತ್ರಚಿಕಿತ್ಸಕ ವಿಭಾಗದ ಮುಖ್ಯಸ್ಥರು, ನಮ್ಮ ಸಂಸ್ಥೆಯ ಹೃದ್ರೋಗ ತಜ್ಞರು ನಿಗಾವಗಿಸಿದ್ದಾರೆ ಎಂದು ಹೇಳಿದ್ದಾರೆ.



Join Whatsapp