ಅಮೆರಿಕ: ಅಕ್ರಮ ಪ್ರವೇಶಿಸಲು ಯತ್ನಿಸಿದ ಮೂವರು ಭಾರತೀಯರ ಬಂಧನ

Prasthutha|

ವಾಷಿಂಗ್ಟನ್: ಕೆನಡಾದ ಸರಕು ರೈಲಿನಲ್ಲಿ ರಹಸ್ಯವಾಗಿ ಪ್ರಯಾಣಿಸಿ ಅಮೆರಿಕದ ಗಡಿಭಾಗದಲ್ಲಿ ನೆಲಕ್ಕೆ ಹಾರಿ ಅಮೆರಿಕವನ್ನು ಅಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ 4 ಮಂದಿಯನ್ನು ಅಮೆರಿಕದ ಗಡಿ ಗಸ್ತು ಪಡೆ ಬಂಧಿಸಿದ್ದು, ಅದರಲ್ಲಿ.ಮೂವರು ಭಾರತೀಯರು ಎಂದು ವರದಿಯಾಗಿದೆ.

- Advertisement -

ಕೆನಡಾದಿಂದ ಆಗಮಿಸಿದ ಸರಕು ರೈಲು ನ್ಯೂಯಾರ್ಕ್‍ನ ಬಫೆಲೊ ನಗರದ ಅಂತಾರಾಷ್ಟ್ರೀಯ ರೈಲು ಸೇತುವೆಯಲ್ಲಿ ಸಂಚರಿಸುವಾಗ ವೇಗ ಕಡಿಮೆಗೊಳಿಸುದ್ದಂತೆಯೇ 4 ಮಂದಿ ನೆಲಕ್ಕೆ ಜಿಗಿದಿದ್ದಾರೆ. ಅದರಲ್ಲಿ ಓರ್ವರು ಮಹಿಳೆಯಾಗಿದ್ದು, ಆಕೆ ಆ ಸಂದರ್ಭ ಮಹಿಳೆ ಗಂಭೀರವಾಗಿ ಗಾಯಗೊಂಡಿದ್ದಾರೆ. ಆಕೆಯನ್ನು ಅಲ್ಲಿಯೇ ಬಿಟ್ಟು ಉಳಿದ ಮೂವರು ಪರಾರಿಯಾಗಿದ್ದಾರೆ. ಮಹಿಳೆಯನ್ನು ವಶಕ್ಕೆ ಪಡೆದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದ ಬಳಿಕ ಪರಾರಿಯಾಗಿದ್ದ ಮೂವರನ್ನೂ ಬಂಧಿಸಲಾಗಿದೆ ಎಂದು ವರದಿಯಾಗಿದೆ.

ಮಹಿಳೆ ಸಹಿತ ಮೂವರು ಭಾರತೀಯರಾಗಿದ್ದರೆ, ಒಬ್ಬ ವ್ಯಕ್ತಿ ಡೊಮಿನಿಕನ್ ಗಣರಾಜ್ಯದ ಪ್ರಜೆಯಾಗಿದ್ದಾರೆ. ನಾಲ್ಕು ಮಂದಿಯ ಬಳಿಯೂ ಅಗತ್ಯವಿರುವ ದಾಖಲೆ ಪತ್ರಗಳಿರಲಿಲ್ಲ.

- Advertisement -

ನಾಲ್ವರನ್ನೂ ನ್ಯೂಯಾರ್ಕ್‍ನ ಬಟಾವಿಯಾ ಫೆಡರಲ್ ಬಂಧನ ಕೇಂದ್ರದಲ್ಲಿ ಇರಿಸಲಾಗಿದೆ. ಗಡಿಪಾರು ಆದೇಶಕ್ಕೆ ಕಾಯಲಾಗುತ್ತಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Join Whatsapp