ಡೆನ್ಮಾರ್ಕ್‌: ಕುರ್‌ಆನ್‌ ಅಪವಿತ್ರಗೊಳಿಸಿದರೆ ಕಠಿಣ ಶಿಕ್ಷೆ

Prasthutha|

ಡೆನ್ಮಾರ್ಕ್‌: ಮಹತ್ವದ ಬೆಳವಣಿಗೆಯೊಂದರಲ್ಲಿ ಡೆನ್ಮಾರ್ಕ್‌ನಲ್ಲಿ ಇಸ್ಲಾಂ ಧರ್ಮದ ಪವಿತ್ರ ಗ್ರಂಥವನ್ನು ಅಪವಿತ್ರಗೊಳಿಸುವುದು, ಸಾರ್ವಜನಿಕ ಸ್ಥಳದಲ್ಲಿ ಸುಡುವುದು ಮುಂತಾದ್ದು ಮಾಡಿದರೆ ಇನ್ನು ಮುಂದೆ ಕಾನೂನು ಬಾಹಿರವಾಗಿ ಪರಿಣಮಿಸಲಿದ್ದು, ಕಠಿಣ ಶಿಕ್ಷೆಗೆ ಒಳಪಡಬೇಕಾಗುತ್ತದೆ. ಈ ಬಗ್ಗೆ ಡೆನ್ಮಾರ್ಕ್‌ನ ಸಂಸತ್ತು ಕಾಯ್ದೆಯನ್ನು ಜಾರಿಗೆ ತಂದಿದ್ದು, ಕಾಯ್ದೆಗೆ ಸಂಸತ್ತಿನಲ್ಲಿ ಅನುಮೋದನೆ ಸಿಕ್ಕಿದೆ.

- Advertisement -

ಯಾವುದೇ ಧಾರ್ಮಿಕ ಸಮುದಾಯ ಗಮನಾರ್ಹ ಪ್ರಾಮುಖ್ಯತೆಯನ್ನು ಹೊಂದಿರುವ ಗ್ರಂಥವನ್ನು ಅವಮಾನಿಸುವುದನ್ನು ಅಪರಾಧ ಎಂದು ಪರಿಗಣಿಸುತ್ತದೆ ಎಂದು ನೂತನ ಕಾನೂನು ಹೇಳುತ್ತದೆ. 179-ಸದಸ್ಯರ ಫೋಲ್ಕೆಟಿಂಗ್ ಎಂದೂ ಕರೆಯಲ್ಪಡುವ ಡ್ಯಾನಿಶ್ ಸಂಸತ್ತು ಪರವಾಗಿ 94 ಮತಗಳೊಂದಿಗೆ ಮಸೂದೆಯನ್ನು ಅಂಗೀಕರಿಸಲಾಗಿದೆ. ಶಾಸನದ ವಿರುದ್ಧ ಕೇವಲ ಎಪ್ಪತ್ತೇಳು ಮತಗಳು ಚಲಾವಣೆಯಾದವು.

ಸಾರ್ವಜನಿಕವಾಗಿ ಧಾರ್ಮಿಕ ಪಠ್ಯಗಳನ್ನು ಸುಡುವುದು, ಹರಿದು ಹಾಕುವುದು ಅಥವಾ ಅಪವಿತ್ರಗೊಳಿಸಿದರೆ ತಪ್ಪಿತಸ್ಥರಿಗೆ ಒಂದು ಅಥವಾ ಎರಡು ವರ್ಷಗಳವರೆಗೆ ಜೈಲು ಅಥವಾ ದಂಡವನ್ನು ವಿಧಿಸಬಹುದು. ವಿಡಿಯೊ ಮಾಡಿ ಪವಿತ್ರ ಪಠ್ಯವನ್ನು ನಾಶಪಡಿಸುವುದು ಮತ್ತು ನಂತರ ದೃಶ್ಯಗಳನ್ನು ಆನ್‌ಲೈನ್‌ನಲ್ಲಿ ಪ್ರಸಾರ ಮಾಡುವುದು ಕೂಡಾ ಅಪರಾಧ. ಇದಕ್ಕೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ನೂತನ ಮಸೂದೆ ಹೇಳುತ್ತದೆ.

- Advertisement -

ನಾವು ಡೆನ್ಮಾರ್ಕ್ ಮತ್ತು ಡೇನ್ಸ್‌ನ ಭದ್ರತೆಯನ್ನು ರಕ್ಷಿಸಬೇಕು ಎಂದು ನ್ಯಾಯ ಮಂತ್ರಿ ಪೀಟರ್ ಹಮ್ಮೆಲ್‌ಗಾರ್ಡ್ ಹೇಳಿದ್ದಾರೆ.

ಕೆಲ ತಿಂಗಳುಗಳ ಹಿಂದೆ ಡೆನ್ಮಾರ್ಕ್‌ ಹಾಗೂ ಸ್ವೀಡನ್‌ನಲ್ಲಿ ಪ್ರತಿಭಟನೆ ವೇಳೆ ಇಸ್ಲಾಂ ಪವಿತ್ರ ಗ್ರಂಥ ಕುರ್‌ಆನ್ ಅನ್ನು ಪ್ರತಿಭಟನಕಾರರು ಸುಟ್ಟು ಹಾಕಿದ್ದರು. ಇದನ್ನು ಖಂಡಿಸಿ ಮುಸ್ಲಿಂ ರಾಷ್ಟ್ರಗಳಲ್ಲಿ ಭಾರೀ ಪ್ರತಿಭಟನೆ ವ್ಯಕ್ತವಾಗಿತ್ತು.

Join Whatsapp