ಸರ್ಕಾರಿ ಆಸ್ಪತ್ರೆಯಿಂದ ಆಂಬ್ಯುಲೆನ್ಸ್ ನಿರಾಕರಣೆ: 3 ವರ್ಷದ ಕಂದಮ್ಮನ ಶವವನ್ನು ಬೈಕ್ ನಲ್ಲಿ ಸಾಗಿಸಿದ ಆದಿವಾಸಿ ಕುಟುಂಬ

Prasthutha|

ಹೈದರಾಬಾದ್: ಆಂಬ್ಯುಲೆನ್ಸ್ ಗೆ ನೀಡಲು ಹಣವಿಲ್ಲದ ಕಾರಣ, 3 ವರ್ಷದ ಕಂದಮ್ಮನ ಮೃತದೇಹವನ್ನು ಆದಿವಾಸಿ ಕುಟುಂಬವೊಂದು 65 ಕಿಲೋಮೀಟರ್ ದೂರದವರೆಗೆ ಬೈಕ್ ನಲ್ಲೇ ಸಾಗಿಸಿದ ಹೃದಯ ವಿದ್ರಾವಕ ಘಟನೆ ತೆಲಂಗಾಣದ ಖಮ್ಮಮ್ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಖಮ್ಮಮ್ ಜಿಲ್ಲೆಯ ಎನುಕುರು ಮಂಡಲದ ಕೋಟಾ ಮೆದೆಪಲ್ಲಿ ಗ್ರಾಮದಲ್ಲಿ ವಾಸಿಸುತ್ತಿದ್ದ ವೆಟ್ಟಿ ಮಲ್ಲಯ್ಯ ಎಂಬ ವ್ಯಕ್ತಿಯ 3 ವರ್ಷದ ಮಗುವನ್ನು ಅನಾರೋಗ್ಯದ ಕಾರಣ ಎನುಕುರು ಸರ್ಕಾರಿ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ವೈದ್ಯರು ಬಾಲಕಿಯ ಸ್ಥಿತಿ ಗಂಭೀರವಾಗಿದೆ ಎಂದಿದ್ದು, ಮಗುವನ್ನು ಖಮ್ಮಮ್ ಸರ್ಕಾರಿ ಆಸ್ಪತ್ರೆಗೆ ಕಳುಹಿಸಲು ಸಲಹೆ ನೀಡಿದರು. ಆದಾಗ್ಯೂ, ಮಗು ಭಾನುವಾರ ಚಿಕಿತ್ಸೆ ಪಡೆಯುತ್ತಿದ್ದಾಗ ಸಾವನ್ನಪ್ಪಿದೆ.

ಮೃತದೇಹವನ್ನು ಕೊಂಡು ಹೋಗಲು ಆಂಬುಲೆನ್ಸ್ ಕೇಳಿದಕ್ಕೆ, ದುಡ್ಡು ನೀಡದ ಕಾರಣ ಹೇಳಿ ಆಸ್ಪತ್ರೆಯ ಸಿಬ್ಬಂದಿ ಆಂಬುಲೆನ್ಸ್ ನೀಡಲು ನಿರಾಕರಿಸಿದ್ದಾರೆ. ಮಗುವನ್ನು ಊರಿಗೆ ಸಾಗಿಸಲು ಆ್ಯಂಬುಲೆನ್ಸ್ ಕಳುಹಿಸಿ ಅಂತ ಆಸ್ಪತ್ರೆ ಸಿಬ್ಬಂದಿ ಬಳಿ ದಂಪತಿ ಗೋಳಾಡಿದ್ದರೂ ಅದಕ್ಕೆ ಆಸ್ಪತ್ರೆ ಸಿಬ್ಬಂದಿ ಒಪ್ಪಿಲ್ಲ. ದುಡ್ಡು ನೀಡದೇ ಆ್ಯಂಬುಲೆನ್ಸ್ ಬರುವುದಿಲ್ಲ. ನಿಮ್ಮ ಶವ ನೀವು ತೆಗೆದುಕೊಂಡು ಹೋಗಿ ಅಂತ ಸಿಬ್ಬಂದಿ ಗದರಿದ್ದಾರೆ.

- Advertisement -

ಹೀಗಾಗಿ ತಂದೆ ವೆಟ್ಟಿ ಮಲ್ಲಯ್ಯ, ಕೊತ್ತ ಮೇಡೆಪಲ್ಲಿ ಗ್ರಾಮಕ್ಕೆ ಹೋಗಿ ತಮ್ಮ ಸಂಬಂಧಿಯ ಜೊತೆ ಬೈಕ್ ನಲ್ಲಿ ವಾಪಸ್ ಆಸ್ಪತ್ರೆಗೆ ಬಂದಿದ್ದು, ನಂತರ ಒಂದೇ ಬೈಕ್ ನಲ್ಲಿ ಮಗುವಿನ ಮೃತದೇಹ, ಆದಿವಾಸಿ ದಂಪತಿ ಹಾಗೂ ಬೈಕ್ ಓಡಿಸುವ ಯುವಕ ಒಟ್ಟು ನಾಲ್ಕು ಜನ 65 ಕಿ.ಲೋ. ದೂರದ ಕೊತ್ತ ಮೇಡೆಪಲ್ಲಿ ಗ್ರಾಮಕ್ಕೆ ತೆರಳಿದ್ದಾರೆ.

Join Whatsapp