ದೆಹಲಿ ಗಲಭೆ: ಕೆಳ ಕೋರ್ಟಿನ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ| ದೆಹಲಿ ಹೈಕೋರ್ಟ್

Prasthutha|

ನವದೆಹಲಿ, ಜು.28: ದೆಹಲಿ ಗಲಭೆ ಸಂದರ್ಭದಲ್ಲಿ ಈಶಾನ್ಯ ದೆಹಲಿಯ ಘೋಂಡಾ ನಿವಾಸಿಯ ಕಣ್ಣಿಗೆ ಪೊಲೀಸ್ ಗುಂಡು ತಗುಲಿದ್ದ ಕೇಸಿಗೆ ಸಂಬಂಧಿಸಿದಂತೆ ಪೊಲೀಸರು ಎಫ್ ಐಆರ್ ದಾಖಲಿಸದ ಬಗೆಗೆ ಕೆಳ ನ್ಯಾಯಾಲಯ ನೀಡಿರುವ ತೀರ್ಪಿನಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ ಎಂದು ದೆಹಲಿ ಹೈಕೋರ್ಟ್ ಬುಧವಾರ ಸ್ಪಷ್ಟಪಡಿಸಿದೆ.

- Advertisement -


ಆದರೆ ಮುಂದಿನ ವಿಚಾರಣೆಯವರೆಗೆ ಪೊಲೀಸರಿಗೆ ಕೆಳ ನ್ಯಾಯಾಲಯ ವಿಧಿಸಿರುವ 25000 ರೂಪಾಯಿ ದಂಡವನ್ನು ಠೇವಣಿ ಇಡಬೇಕಾಗಿಲ್ಲ ಎಂದೂ ದೆಹಲಿ ಹೈಕೋರ್ಟ್ ಹೇಳಿದೆ. ನ್ಯಾಯಮೂರ್ತಿ ಸುಬ್ರಹ್ಮಣ್ಯ ಪ್ರಸಾದ್ ಅವರು ನಿಮ್ಮ ಮಾತನ್ನು ಆಲಿಸಿದ ಬಳಿಕವಷ್ಟೆ ಈ ಬಗ್ಗೆ ತೀರ್ಮಾನ ಕೈಗೊಳ್ಳುತ್ತೇವೆ ಎಂದರು.


ಕೆಳ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಎರಡು ಆದೇಶಗಳನ್ನು ಪೊಲೀಸರು ದೆಹಲಿ ಹೈಕೋರ್ಟ್ ನಲ್ಲಿ ಪ್ರಶ್ನಿಸಿದ್ದರು. 2020ರ ಅಕ್ಟೋಬರ್ 21ರಂದು ನೀಡಿದ ಮುಹಮ್ಮದ್ ನಾಸೀರ್ ದೂರಿನ ಮೇಲೆ ಎಫ್ ಐಆರ್ ದಾಖಲಿಸಬೇಕು ಎಂಬುದನ್ನು ಪ್ರಶ್ನಿಸಲಾಗಿದೆ. ಅದೇ ರೀತಿ ಹೆಚ್ಚುವರಿ ಸೆಶನ್ಸ್ ಜಡ್ಜ್ ವಿನೋದ್ ಯಾದವ್ ತನಿಖಾ ದಳದ ಮನವಿಯನ್ನು ವಜಾ ಮಾಡಿದ್ದನ್ನು ಹೈಕೋರ್ಟ್ ನಲ್ಲಿ ಪ್ರಶ್ನಿಸಲಾಗಿದೆ.

- Advertisement -


ಫೆಬ್ರವರಿ 24ರಂದು ನನ್ನ ಮನೆಯ ಬಳಿ ಗುಂಡು ಹಾರಿದೆ, ಇದರಿಂದ ನನ್ನ ಎಡ ಕಣ್ಣಿಗೆ ಹಾನಿ ಆಗಿದೆ ಎಂದು ನಾಸಿರ್ ಮಾರ್ಚ್ 19ರಂದು ದೂರು ನೀಡಿದ್ದರು. ಅವರು ದೂರಿನಲ್ಲಿ ನರೇಶ್ ತ್ಯಾಗಿ, ಸುಭಾಷ್ ತ್ಯಾಗಿ, ಉತ್ತಮ್ ತ್ಯಾಗಿ, ಸುಶೀಲ್, ನರೇಶ್ ಗೌರ್ ಮೊದಲಾದವರನ್ನು ಹೆಸರಿಸಿದ್ದರು. ದೂರಿನಂತೆ ಬೇರೆ ಧರ್ಮಕ್ಕೆ ಸೇರಿದವರು ಎಂಬ ಕಾರಣಕ್ಕೆ ನಾಸಿರ್ ಮೇಲೆ ಗುಂಡು ಹಾರಿಸಲಾಗಿತ್ತು. ಈ ದೂರಿನ ಮೇಲೆ ಎಫ್ ಐಆರ್ ದಾಖಲಾಗದ್ದರಿಂದ ಅವರು ಕೆಳ ಕೋರ್ಟ್ ಗೆ ಹೋಗಿದ್ದರು.


ಗುಂಡು ಹಾರಾಟದ ಸಂಬಂಧ ಏಳು ಜನರಿಗೆ ಗಾಯವಾದ ಬಗೆಗೆ ಬೇರೆಯೇ ಎಫ್ ಐಆರ್ ದಾಖಲಾಗಿದೆ, ಅದರಲ್ಲಿ ನಾಸಿರ್ ಹೆಸರೂ ಇದೆ ಎಂಬುದು ಪೊಲೀಸರ ವಾದವಾಗಿದೆ. ಇವೆಲ್ಲದರ ನಡುವೆ ಕೆಳ ಕೋರ್ಟ್, ನಾಸಿರ್ ಹೆಸರಿಸಿದ ವ್ಯಕ್ತಿಗಳ ಬಗೆಗೆ ಮಾಹಿತಿ ದೊರೆತಿಲ್ಲ ಎಂದಿದೆ. ಹೆಚ್ಚುವರಿ ಸೆಶನ್ಸ್ ಜಡ್ಜ್ ವಿನೋದ್ ಯಾದವ್, ಬೇರೆ ಎಫ್ ಐಆರ್ ಇದ್ದರೂ ಈ ದೂರಿನ ಬಗೆಗೆ ಎಫ್ಐಆರ್ ದಾಖಲಿಸದಿರುವುದು ಪೊಲೀಸರ ವೈಫಲ್ಯ ಎಂದು ತೀರ್ಪಿನಲ್ಲಿ ಹೇಳಿದ್ದರು.


ವಿಷಯ ಆಘಾತಕಾರಿ ಆಗಿದೆ, ಆದ್ದರಿಂದ ಭೋಜನ್ಪುರ ಪೊಲೀಸ್ ಠಾಣೆಗೆ ರೂ. 25000 ರೂಪಾಯಿ ದಂಡ ಸಹ ವಿಧಿಸಿದ್ದರು.
ಪೊಲೀಸರ ಪರ ಹೈಕೋರ್ಟಿನಲ್ಲಿ ಹಾಜರಾದ ಹೆಚ್ಚುವರಿ ಸಾಲಿಸಿಟರ್ ಜನರಲ್ ಸಿ. ವಿ. ರಾಜು ಅವರು, ಪೊಲೀಸರಿಗೆ ಇವೆಲ್ಲ ವ್ಯವಹಾರ ಭಾರೀ ವೆಚ್ಚದಾಯಕವಾಗುತ್ತದೆ. ಈ ಬಗೆಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ. ದೂರಿನಲ್ಲಿ ಹೆಸರಿಸಲಾದ ವ್ಯಕ್ತಿ ದೆಹಲಿಯಿಂದ 150 ಕಿ.ಮೀ. ದೂರ ಇದ್ದಾರೆ. ಅವರು ಇಲ್ಲದೆ ವಿಚಾರಣೆ ಅಪ್ರಸ್ತುತ ಎನಿಸುತ್ತದೆ ಎಂದರು.

Join Whatsapp