ರಾಜಕೀಯ ಅಧಿಕಾರ ದೊರಕದ ಉತ್ತರ ಕರ್ನಾಟಕದ ಜನರಿಗೆ ಬೊಮ್ಮಾಯಿ ಆಯ್ಕೆ ಸಂತಸ ತಂದಿದೆ: ಎಚ್.ಕೆ ಪಾಟೀಲ್

Prasthutha|

ಗದಗ: ರಾಜಕೀಯ ಅಧಿಕಾರ ಉತ್ತರ ಕರ್ನಾಟಕದ ಭಾಗದವರಿಗೆ ದೊರಕದ ಹಿನ್ನೆಲೆಯಲ್ಲಿ ಉತ್ತರ ಕರ್ನಾಟಕದಲ್ಲಿ ಅಭಿವೃದ್ಧಿ ಕುಟಿಂತವಾಗಿತ್ತು. ಉತ್ತರ ಕರ್ನಾಟಕದ ಜನರ ಬಯಕೆಗೆ ಇವತ್ತು ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವುದು ಸಂತಸ ತಂದಿದೆ ಎಂದು ಕಾಂಗ್ರೆಸ್ ಹಿರಿಯ ಶಾಸಕ ಎಚ್ ಕೆ ಪಾಟೀಲ್ ಹೇಳಿದ್ದಾರೆ.

- Advertisement -

ನೂತನ ಸಿಎಂ ಬಸವರಾಜ್ ಬೊಮ್ಮಾಯಿ ಆಯ್ಕೆ ಹಿನ್ನೆಲೆಯಲ್ಲಿ ಗದಗದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿ ಸ್ಥಾನ ವಂಚಿತರಾಗಿರುವ ಉತ್ತರ ಕರ್ನಾಟಕ ಭಾಗದ ಜನರ ಭಾವನೆಗಳು ಘಾಸಿಗೊಂಡಿತ್ತು. ಬಸವರಾಜ್ ಬೊಮ್ಮಾಯಿ ಅವರು ಮುಖ್ಯಮಂತ್ರಿಯಾಗಿರುವುದು ಉತ್ತರ ಕರ್ನಾಟಕದ ಜನರಿಗೆ ಸಂತಸ ತಂದಿದೆ. ಬೊಮ್ಮಾಯಿ ಅವರು ನಮ್ಮ ಸ್ನೇಹಿತರು ಉತ್ತಮ ಆಡಳಿಗಾರರು, ಭಾಷಣಕಾರರು ಹೌದು. ಅವರ ಆಡಳಿತ ಕಾಲದಲ್ಲಿ ಎಲ್ಲಾ ಒಳ್ಳೆಯದಾಗಲಿ ಎಂದು ಹಾರೈಸಿದ್ದಾರೆ.

ಉತ್ತರ ಕರ್ನಾಟಕದ ಭಾಗದ ಮಹದಾಯಿ ನದಿಯ ಜೋಡಣೆ ಯೋಜನೆ, ಕೃಷ್ಣಾ ನದಿಯ ಬಹಳಷ್ಟು ಕೆಲಸವಾಗಬೇಕಿದೆ. ಯುಕೆಪಿ ಮುಂದುವರಿದ ಭಾಗ ಸ್ಥಗಿತಗೊಂಡಿದೆ, ಅಲ್ಲದೆ ಹಲವಾರು ಯೋಜನೆಗಳು ರಿಂಗ್ ರಿಂಗಾಗಿ ಅಲ್ಲೇ ಬಿದ್ದಿವೆ. ಅವುಗಳನ್ನು ಕೈಗೆ ಎತ್ತಿಕೊಂಡು ಯೋಜನೆ ಜಾರಿಗೆ ತರುವ ಕೆಲಸವಾಗಬೇಕು. ಗ್ರ್ಯಾಂಟ್ ಆಗದೆ ಸಾವಿರ ಸಾವಿರ ಶಿಕ್ಷಣ ಸಂಸ್ಥೆಗಳು ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳಬೇಕಿದೆ. ಉತ್ತರ ಕರ್ನಾಟಕದ ಭಾಗದ ಜನರ ಬೇಡಿಕೆಗಳಿಗೆ ವಿಶೇಷವಾದ ಗಮನ ಹರಿಸಬೇಕು ಎಂದು ನೂತನ ಮುಖ್ಯಮಂತ್ರಿಗೆ ಎಚ್.ಕೆ. ಪಾಟೀಲ್ ಮನವಿ ಮಾಡಿದ್ದಾರೆ.  

Join Whatsapp