ಯಡಿಯೂರಪ್ಪ ಜುಲೈ 10 ರಂದೇ ಪ್ರಧಾನಿ ಮೋದಿಗೆ ರಾಜೀನಾಮೆ ನೀಡಿದ್ದರು : ಮಾಧ್ಯಮ ವರದಿ

Prasthutha|

ನವದೆಹಲಿ ಜುಲೈ 28: ಕಣ್ಣೀರಿಡುವ ಮೂಲಕ ಇತ್ತಿಚೆಗೆ ಭಾವುಕರಾಗಿ ಅಧಿಕೃತ ರಾಜೀನಾಮೆ ಸಲ್ಲಿಸಿರುವ ಯಡಿಯೂರಪ್ಪನವರು ವಾರಗಳ ಹಿಂದೆಯೆ ಪ್ರಧಾನಿಗೆ ರಾಜೀನಾಮೆ ಪತ್ರವನ್ನು ರವಾನಿಸಿದ್ದರು ಎಂದು ಮೂಲಗಳು ಸ್ಪಷ್ಟಪಡಿಸಿದೆ. ಆದರೆ ಯಡಿಯೂರಪ್ಪನವರು ತಮ್ಮ ನಿರ್ಗಮನದ ಸುದ್ದಿಯನ್ನು ನಿನ್ನೆಯ ವರೆಗೆ ಗೌಪ್ಯ ಮತ್ತು ಜೀವಂತವಾಗಿರಿಸಿದ್ದರು. ಮೂಲಗಳ ಪ್ರಕಾರ ಯಡಿಯೂರಪ್ಪ ಅವರು ಜುಲೈ 10 ರಂದೇ ತನ್ನ ರಾಜೀನಾಮೆಯನ್ನು ಪ್ರಧಾನಿ ಮೋದಿ ಅವರಿಗೆ ನೀಡಿದ್ದರು. ಅವರ ಆಪ್ತ ವಲಯದ ಪಕ್ಷದ ಹಿರಿಯ ನಾಯಕರು ಈ ಮಾಹಿತಿಯನ್ನು ಖಚಿತಪಡಿಸಿದ್ದಾರೆಂದು ಎನ್ಡಿಟಿವಿ ವರದಿ ಮಾಡಿದೆ.

- Advertisement -

ಇತ್ತೀಚೆಗೆ ಯಡಿಯೂರಪ್ಪನವರು ಪ್ರಧಾನಿ ಮೋದಿ ಮತ್ತು ಇತರ ಕೇಂದ್ರ ಬಿಜೆಪಿ ನಾಯಕರನ್ನು ದೆಹಲಿಯಲ್ಲಿ ಭೇಟಿ ಮಾಡಿದ ಸಂದರ್ಭದಲ್ಲಿ ರಾಜೀನಾಮೆ ವದಂತಿ ದಟ್ಟವಾಗಿತ್ತು. ಪ್ರಧಾನಿ ಮೋದಿ ಭೇಟಿಯ ವೇಳೆಯಲ್ಲಿ ತನ್ನ ಆರೋಗ್ಯದ ಸಮಸ್ಯೆಯಿಂದ ಮುಖ್ಯಮಂತ್ರಿ ಸ್ಥಾನವನ್ನು ತ್ಯಜಿಸಲು ಮುಂದಾಗಿದ್ದರು ಎನ್ನಲಾಗಿದೆ.
ಆದರೆ ರಾಜೀನಾಮೆ ವದಂತಿಯನ್ನು ಮುಚ್ಚಿಟಿದ್ದ ಯಡಿಯೂರಪ್ಪನವರು ಸುದ್ದಿಗಾರರು ರಾಜೀನಾಮೆ ಕುರಿತ ಪ್ರಶ್ನೆಗಳಿಗೆ ಇದರಲ್ಲಿ ಯಾವುದೇ ಹುರುಳಿಲ್ಲವೆಂದು ನುಣುಚಿಕೊಂಡಿದ್ದರು. ಪ್ರಧಾನಿ ಮೋದಿ ಭೇಟಿಯ ನಂತರ ರಾಜೀನಾಮೆ ಒತ್ತಡ ಜಾಸ್ತಿಯಾಗತೊಡಗಿದಾಗ ಆಗಸ್ಟ್ 15 ರ ಸ್ವಾತಂತ್ರ ದಿನದ ನಂತರ ರಾಜೀನಾಮೆ ನೀಡುವುದಾಗಿ ತಿಳಿಸಿದ್ದರು ಎನ್ನಲಾಗಿದೆ.


ಯಡಿಯೂರಪ್ಪನವರು ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಮತ್ತು ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿಯಾಗಿ ರಾಜೀನಾಮೆ ಪಡೆಯದಂತೆ ಮನವೊಲಿಸಲು ಪ್ರಯತ್ನಿಸಿದ್ದರು. ನಂತರ ಸುದ್ದಿಗಾರದೊಂದಿಗೆ ಮಾತನಾಡಿ ಪಕ್ಷವು ತನ್ನ ಮೇಲೆ ಅಪಾರ ನಂಬಿಕೆ ಹೊಂದಿದೆ ಮತ್ತು ಕರ್ನಾಟಕದಲ್ಲಿ ಪಕ್ಷವನ್ನು ಬಲಪಡಿಸಲು ಕೇಂದ್ರ ನಾಯಕತ್ವ ಬಯಸಿದೆ ಎಂದು ಅವರು ಹೇಳಿದರು.

- Advertisement -


ಯಡಿಯೂರಪ್ಪ ಅವರ ಸರ್ಕಾರದ ಎರಡು ವರ್ಷಗಳನ್ನು ಪೂರೈಸಿದ ನಂತರ ಮುಖ್ಯಮಂತ್ರಿಯಾಗಿ ಮುಂದುವರಿಯಲು ಅವಕಾಶವಿಲ್ಲವೆಂದು ಖಚಿತವಾಗಿತ್ತು . ಭಾನುವಾರ ಸಂಜೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಬಿಜೆಪಿಯಿಂದ ಇಲ್ಲಿಯವರೆಗೆ ನನಗೆ ರಾಜೀನಾಮೆಯ ಕುರಿತು ಯಾವುದೇ ಸೂಚನೆ ಬಂದಿಲ್ಲ. ಆದರೆ ಸೋಮವಾರ ಯಡಿಯೂರಪ್ಪನವರಿಗೆ ಕೇಂದ್ರದಿಂದ ರಾಜೀನಾಮೆ ನೀಡುವಂತೆ ಸಂದೇಶ ರವಾನೆಯಾಗಿತ್ತು ಎಂದು ಹೇಳಲಾಗುತ್ತಿದೆ.

ವಾಸ್ತವದಲ್ಲಿ ಜುಲೈ 10 ರಂದು ಕೇಂದ್ರಕ್ಕೆ ರಾಜೀನಾಮೆ ಪತ್ರವನ್ನು ಸಲ್ಲಿಸಿದ ಯಡಿಯೂರಪ್ಪನವರು ಪಕ್ಷದ ವರಿಷ್ಠರ ಆದೇಶದ ಮೇರೆಗೆ ಜುಲೈ 27 ರಂದು ಅಧಿಕೃತವಾಗಿ ರಾಜೀನಾಮೆ ಸಲ್ಲಿಸಿದ್ದಾರೆ.

Join Whatsapp