ವೇತನ ಪಡೆಯುವುದು ಮೂಲಭೂತ ಹಕ್ಕು : ದೆಹಲಿ ಹೈಕೋರ್ಟ್

Prasthutha|

ನವದೆಹಲಿ : ಅನುದಾನದ ಕೊರತೆಯ ಕಾರಣ ನೀಡಿ ತಮ್ಮ ನೌಕರರಿಗೆ ವೇತನ ನೀಡದಿರುವ ದೆಹಲಿ ಮಹಾನಗರ ಪಾಲಿಕೆಯನ್ನು ದೆಹಲಿ ಹೈಕೋರ್ಟ್ ತೀವ್ರ ತರಾಟೆಗೆ ತೆಗೆದುಕೊಂಡಿದೆ. ವೇತನ ಪಡೆಯುವುದು ಮೂಲಭೂತ ಹಕ್ಕು ಎಂದು ಹೈಕೋರ್ಟ್ ಅಭಿಪ್ರಾಯ ಪಟ್ಟಿದೆ.

- Advertisement -

ನ್ಯಾ. ವಿಪಿನ್ ಸಂಘಿ ಮತ್ತು ನ್ಯಾ. ರೇಖಾ ಪಳ್ಳಿ ನ್ಯಾಯಪೀಠ ಈ ತೀರ್ಪು ನೀಡಿದೆ. ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ನ ನೌಕರರಿಗೆ ವೇತನ ಮತ್ತು ಪಿಂಚಣಿ ನೀಡದಿರುವ ಬಗ್ಗೆ ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿ ಹೈಕೋರ್ಟ್ ಈ ರೀತಿ ಪ್ರತಿಕ್ರಿಯಿಸಿದೆ.

ಅನುದಾನದ ಕೊರತೆಯ ಕಾರಣ ನೀಡಿ, ಸಮಯಕ್ಕೆ ಸರಿಯಾಗಿ ವೇತನ ಪಾವತಿಸದಿರುವುದಕ್ಕೆ ಯಾವುದೇ ವಿನಾಯ್ತಿ ನೀಡಲು ಸಾಧ್ಯವಿಲ್ಲ. ವೇತನ ಪಡೆಯುವುದು ಮತ್ತು ಪಿಂಚಣಿ ಪಡೆಯುವುದು ಸಂವಿಧಾನದ 21ನೇ ಪರಿಚ್ಛೇದದಡಿ ನೀಡಲಾದ ಮೂಲಭೂತ ಹಕ್ಕು, ವೇತನ ಪಾವತಿಸದಿರುವುದರಿಂದ ಜೀವನದ ಗುಣಮಟ್ಟದ ಮೇಲೆ ಪರಿಣಾಮ ಬೀರುವುದು ಎಂದು ನ್ಯಾಯಪೀಠ ತಿಳಿಸಿದೆ.



Join Whatsapp