ವಿವಾದಾತ್ಮಕ ಅಂಶಗಳಿಗೆ ಕತ್ತರಿ ಹಾಕಲು ತಾಂಡವ್ ತಂಡದ ನಿರ್ಧಾರ

Prasthutha|

- Advertisement -

ಧಾರ್ಮಿಕ ಬಾವನೆಗಳಿಗೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿ ಪ್ರಕರಣ ದಾಖಲಿಸಲ್ಪಟ್ಟ ಅಮೆಜಾನ್ ಧಾರವಾಹಿ ತಾಂಡವ್ ನ ವಿವಾದಾತ್ಮಕ ಅಂಶಗಳಿಗೆ ಕತ್ತರಿ ಹಾಕಲು ನಿರ್ಮಾಪಕರು ನಿರ್ಧರಿಸಿದ್ದಾರೆ. ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಅಧಿಕಾರಿಗಳೊಂದಿಗೆ ಎರಡನೇ ಸುತ್ತಿನ ಮಾತುಕತೆ ನಡೆಸಿದ ನಂತರ ಬೇಷರತ್ತಾಗಿ ಕ್ಷಮೆಯಾಚಿಸಿ ವಿವರಣೆಯನ್ನು ನೀಡುವ ಮೂಲಕ ನಿರ್ಮಾಪಕರು ಈ ಕ್ರಮಕ್ಕೆ ಮುಂದಾಗಿದ್ದಾರೆ.

“ಯಾವುದೇ ವ್ಯಕ್ತಿ, ಜಾತಿ, ಸಮುದಾಯ, ಧರ್ಮ, ಧಾರ್ಮಿಕ ನಂಬಿಕೆಗಳ ಭಾವನೆಗಳಿಗೆ ಧಕ್ಕೆ ತರುವ ಅಥವಾ ಯಾವುದೇ ಸಂಸ್ಥೆ, ರಾಜಕೀಯ ಪಕ್ಷವನ್ನು ಅವಹೇಳನ ಮಾಡುವ ಉದ್ದೇಶವನ್ನು ನಾವು ಹೊಂದಿರಲಿಲ್ಲ. ನಾವು ಧಾರವಾಹಿ ವಿರುದ್ಧದ ದೂರುಗಳನ್ನು ಪರಿಗಣಿಸಲು ನಿರ್ಧರಿಸಿದ್ದೇವೆ. ಈ ವಿಷಯದ ಕುರಿತು ಮಾಹಿತಿ ಮತ್ತು ಪ್ರಸಾರ ಸಚಿವಾಲಯ ನೀಡಿದ ಸಲಹೆಗಳಿಗೆ ಧನ್ಯವಾದಗಳು” ಎಂದು ನಿರ್ದೇಶಕ ಅಬ್ಬಾಸ್ ಅಲಿ ಸಫರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಕೇಂದ್ರ ಸಚಿವಾಲಯ, ಅಮೆಜಾನ್ ಪ್ರತಿನಿಧಿಗಳು ಮತ್ತು ಧಾರವಾಹಿಯ ನಿರ್ಮಾಪಕರ ನಡುವೆ ಎರಡು ದಿನಗಳ ಚರ್ಚೆಯ ನಂತರ ವಿವಾದಾತ್ಮಕ ಅಂಶಗಳಿಗೆ ಕತ್ತರಿ ಹಾಕಲು ಅಂತಿಮವಾಗಿ ನಿರ್ಧರಿಸಲಾಗಿದೆ.

Join Whatsapp