ಫೇಸ್ ಬುಕ್ ಲೈವ್ ನಲ್ಲಿಯೇ ರಾಷ್ಟ್ರ ಧ್ವಜಕ್ಕೆ ಅವಮಾನ: ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗೆ ದೂರು

Prasthutha|

ಬೆಂಗಳೂರು: ಫೇಸ್ ಬುಕ್ ಲೈವ್ ನಲ್ಲಿಯೇ  ರಾಷ್ಟ್ರ ಧ್ವಜವನ್ನು ತಲೆಕೆಳಗಾಗಿಸಿ  ರಾಷ್ಟ್ರ ಧ್ವಜಕ್ಕೆ ಅವಮಾನವೆಸಗಿದ್ದಾರೆ ಎಂದು ಆರೋಪಿಸಿ ಅನಿಲ್ ಚಳಗೇರಿ ಎಂಬಾತನ ವಿರುದ್ಧ ಎಸ್. ಸುದರ್ಶನ್, ಬಿ.ಡಿ. ರಾಹುಲ್ ಸೇರಿದಂತೆ ಕೆಲವು ಸಾರ್ವಜನಿಕರು ಕೆಂಗೇರಿ ಠಾಣಾಧಿಕಾರಿಗೆ ದೂರು ನೀಡಿದ್ದಾರೆ.

- Advertisement -

ಆಗಸ್ಟ್ 9 ರಂದು ಕೆಂಗೇರಿ ಉಪನಗರ ಶಿರ್ಕೆ ಬಡಾವಣೆಯ ನಿವಾಸಿ ಅನಿಲ್ ಚಳಗೇರಿ ರಾಷ್ಟ್ರಧ್ವಜದ ಕುರಿತು ಫೇಸ್ ಬುಕ್ ಲೈವ್ ನಲ್ಲಿ ಮಾಹಿತಿ ನೀಡುವ ಸಂದರ್ಭದಲ್ಲಿ ಅವರು ಕುಳಿತಿದ್ದ ಸ್ಥಳದ ಹಿಂಭಾಗದಲ್ಲಿ ರಾಷ್ಟ್ರಧ್ವಜವನ್ನು ತಲೆಕೆಳಗಾಗಿ ಹಾಕುವ ಮೂಲಕ ರಾಷ್ಟ್ರಧ್ವಜಕ್ಕೆ ಅವಮಾನ ಎಸಗಿದ್ದಾರೆ. ಅಲ್ಲದೆ, ವೀಕ್ಷಕರು ಲೈವ್ ನಲ್ಲಿಯೇ ರಾಷ್ಟ್ರಧ್ವಜವನ್ನು ಸರಿಪಡಿಸಲು ಸೂಚಿಸಿದ್ದರೂ ಅದಕ್ಕೆ ಗಮನ ನೀಡದೆ ಅವರು ತಮ್ಮ ಮಾತನ್ನು ಮುಂದುವರಿಸಿದ್ದರು. ಮಾತ್ರವಲ್ಲ ತಮ್ಮ ತಪ್ಪಿಗೆ ಕ್ಷಮೆಯಾಚಿಸಲೂ ಇಲ್ಲ.   ಆದ್ದರಿಂದ ಈ ಕೂಡಲೇ ಚಳಗೇರಿ ವಿರುದ್ಧ ದಿ ಪ್ರಿವೆನ್ಷನ್ ಆಫ್ ಇನ್ಸಲ್ಟ್ಸ್ ಟು ನ್ಯಾಷನಲ್ ಹಾನರ್ ಆ್ಯಕ್ಟ್ 1971  ಪ್ರಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಅವರು ದೂರಿನಲ್ಲಿ ಮನವಿ ಮಾಡಿದ್ದಾರೆ.

Join Whatsapp