ನವದೆಹಲಿ, ಆಗಸ್ಟ್ 3 : ಮುಸ್ಲಿಮ್ ಮಹಿಳೆಗೆ ಸಾಮಾಜಿಕ ಜಾಲಾತಾಣದಲ್ಲಿ ಅವಹೇಳನಕಾರಿ ಸಂದೇಶಗಳನ್ನು ರವಾನಿಸಿದ ವ್ಯಕ್ತಿಗಳ ಮೇಲೆ ಪೊಲೀಸರ ನಿಲುವಿನ ಕುರಿತು ಸ್ಪಷ್ಟೀಕರಣ ಕೋರಿ ದೆಹಲಿ ಮಹಿಳಾ ಸಮಿತಿಯು ದೆಹಲಿ ಪೊಲೀಸರಿಗೆ ನೋಟಿಸ್ ನೀಡಿದೆ.
ಮಾತ್ರವಲ್ಲದೇ ಆಗಸ್ಟ್ 5 ರಂದು ವರದಿ ಒಪ್ಪಿಸುವಂತೆ ದೆಹಲಿ ಮಹಿಳಾ ಸಮಿತಿ ಪೊಲೀಸ್ ಇಲಾಖೆಯನ್ನು ಆಗ್ರಹಿಸಿದೆ.
ಕೆಲವು ದುಷ್ಕರ್ಮಿಗಳು ಮುಸ್ಲಿಮ್ ಮಹಿಳೆಯರ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಅವಹೇಳನಕಾರಿ ಸಂದೇಶಗಳನ್ನು ರವಾನಿಸುವ ಮೂಲಕ ಅವರ ಮೇಲೆ ದುಷ್ಕೃತ್ಯಕ್ಕೆ ಮುಂದಾಗುತ್ತಿದೆಯೆಂಬ ದೂರು ನಮಗೆ ಲಭಿಸಿದೆ ಎಂದು ಡಿಸಿಡಬ್ಲ್ಯೂ ತಿಳಿಸಿದೆ.
ಸಾಮಾಜಿಕ ಜಾಲತಾಣದಲ್ಲಿ ಮುಸ್ಲಿಮ್ ಮಹಿಳೆಯರ ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ ಮುಸ್ಲಿಮ್ ಮಹಿಳೆಯರನ್ನು ಅತ್ಯಾಚಾರಕ್ಕೆ ಒಳಪಡಿಸುವಂತೆ ಪೋಸ್ಟ್ ಹಾಕಲಾಗಿದೆಯೆಂಬ ದೂರಿನ ಹಿನ್ನೆಲೆಯಲ್ಲಿ ಈ ಕ್ರಮಕ್ಕೆ ಮುಂದಾಗಿದ್ದೇವೆಂದು ಡಿಸಿಡಬ್ಲ್ಯೂ ತಿಳಿಸಿದೆ.
ಈ ಆರೋಪಿಗಳು ದೆಹಲಿಯಲ್ಲಿ ವಾಸವಾಗಿದ್ದಾರೆ. ಆರೋಪಿಗಳ ವಿರುದ್ಧ ದಾಖಲಾಗಿರುವ ಎಫ್.ಐ.ಅರ್ ಪ್ರತಿಯನ್ನು ಯುಪಿ ಪೊಲೀಸರಿಗೆ ಸಲ್ಲಿಸಿರುವ ಸಮಿತಿ, ಅರೋಪಿಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುವಂತೆ ಯುಪಿ ಪೊಲೀಸರಿಗೆ ಒತ್ತಾಯಿಸಲಾಗಿದೆಯೆಂದು ಡಿಸಿಡಬ್ಲ್ಯೂ ತಿಳಿಸಿದೆ. ಮಾತ್ರವಲ್ಲದೇ ಜಾಲತಾಣದಿಂದ ಅವಹೇಳನ ಸಂದೇಶವನ್ನು ಅಳಿಸಿ ಹಾಕಿಸುವಂತೆ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದೆ.