ಮಾಸ್ಕ್ ಹಾಕಿದ್ದ ತನ್ನನ್ನು ಗುರುತಿಸದ ಮಹಿಳಾ ಪೇದೆಗೆ ಶಿಕ್ಷೆ ನೀಡಿದ ಡಿಸಿಪಿ | ಕರ್ತವ್ಯಕ್ಕೆ ಹಾಜರಾಗಿ ಒಂದೇ ವಾರದಲ್ಲಿ ಯಡವಟ್ಟು!

Prasthutha|

ಕೊಚ್ಚಿ : ಹೊಸದಾಗಿ ಸೇವೆಗೆ ಸೇರಿಕೊಂಡಿರುವ ಡಿಸಿಪಿಯೊಬ್ಬರು, ತಮ್ಮನ್ನು ಗುರುತಿಸಲಿಲ್ಲ ಎಂದು ಪೊಲೀಸ್ ಕಾನ್ಸ್ ಟೇಬಲ್ ಒಬ್ಬರನ್ನು ದಂಡನೆಗೆ ಗುರಿ ಮಾಡಿದುದು ಈಗ ಭಾರೀ ವಿವಾದಕ್ಕೆ ಕಾರಣವಾಗಿದೆ.

- Advertisement -

ಕೇರಳದ ಕೊಚ್ಚಿಯಲ್ಲಿ ಜ.1ರಂದು ಡಿಸಿಪಿ ಆಗಿ ಐಶ್ವರ್ಯಾ ಅಧಿಕಾರ ವಹಿಸಿಕೊಂಡಿದ್ದಾರೆ. ಭಾನುವಾರದ ದಿನ ಅಂದು ಅವರು ಸ್ಥಳೀಯ ಪೊಲೀಸ್ ಠಾಣೆಯೊಂದರ ಪರಿಶೀಲನೆಗೆ ಹೋಗಿದ್ದಾರೆ. ಈ ವೇಳೆ ಸಮವಸ್ತ್ರವನ್ನು ಧರಿಸದೆ, ಸಾಮಾನ್ಯ ಬಟ್ಟೆಯಲ್ಲೇ ಮುಖಕ್ಕೆ ಮಾಸ್ಕ್ ಧರಿಸಿ ಹೋಗಿದ್ದಾರೆ.

ಪೊಲೀಸ್ ವಾಹನವನ್ನು ಸ್ವಲ್ಪ ದೂರದಲ್ಲೇ ನಿಲ್ಲಿಸಿ, ಠಾಣೆಗೆ ಪ್ರವೇಶಿಸಿದ್ದಾರೆ. ಈ ವೇಳೆ ಅಲ್ಲಿ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಪೇದೆಯೊಬ್ಬರು ಅವರನ್ನು ತಡೆದಿದ್ದಾರೆ. ಆದರೆ, ಉನ್ನತಾಧಿಕಾರಿಯಾದ ತನ್ನನ್ನು ಗುರುತಿಸಲಿಲ್ಲ ಎಂದು ಸಿಟ್ಟಿನಿಂದ ಡಿಸಿಪಿ ಐಶ್ವರ್ಯಾ ಪೇದೆಗೆ ಎರಡು ದಿನಗಳ ಟ್ರಾಫಿಕ್ ವಿಭಾಗದಲ್ಲಿ ಕೆಲಸ ಮಾಡುವ ಶಿಕ್ಷೆ ವಿಧಿಸಿದ್ದಾರೆ.

- Advertisement -

ಪೊಲೀಸರೆಂದರೆ ಯಾವಾಗಲೂ ಅಲರ್ಟ್ ಇರಬೇಕು. ಉನ್ನತ ಅಧಿಕಾರಿಗಳ ಬಗ್ಗೆಯೂ ಮಾಹಿತಿಯಿರಬೇಕು. ಆ ಪೇದೆಗೆ ಮಾಹಿತಿಯಿಲ್ಲದ ಹಿನ್ನೆಲೆಯಲ್ಲಿ ಶಿಕ್ಷೆ ನೀಡಿದ್ದೇನೆ ಎಂದು ಐಶ್ವರ್ಯಾ ಹೇಳಿದ್ದಾರೆ.

ಆದರೆ, ಐಶ್ವರ್ಯಾ ಅಧಿಕಾರ ವಹಿಸಿಕೊಂಡು ಕೇವಲ ಒಂದು ವಾರವಾಗಿದೆಯಷ್ಟೇ, ಅದರಲ್ಲೂ ಮಾಸ್ಕ್ ಹಾಕಿಕೊಂಡಿದ್ದಾಗ ನಮ್ಮವರನ್ನೇ ಗುರುತಿಸುವುದು ಕಷ್ಟ. ಹೀಗಿರುವಾಗ ಆಕೆಯನ್ನು ಗುರುತಿಸುವುದು ಪೇದೆಗೆ ಕಷ್ಟವಾಗಿದೆ. ಕೊರೊನ ಕಾರಣದಿಂದ ಠಾಣೆಗೆ ಹೆಚ್ಚು ಜನರು ಬರುವಂತಿಲ್ಲ ಎನ್ನುವ ನಿಯಮವಿದ್ದು, ಅದರಿಂದಾಗಿಯೇ ಆಕೆ ವಿಚಾರಣೆ ಮಾಡಿದ್ದಾಗಿ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಅಧಿಕಾರ ವಹಿಸಿಕೊಂಡು 15 ದಿನಗಳೊಳಗೆ ಇಂತಹ ಶಿಕ್ಷೆ ನೀಡುವುದು ತಪ್ಪಾಗುತ್ತದೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.    

Join Whatsapp