ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ: ನಂಜುಂಡಪ್ಪ.ವಿ. ಸೇರಿ ಮೂವರು ಪತ್ರಕರ್ತರಿಗೆ ಸನ್ಮಾನ

Prasthutha|

ಬೆಂಗಳೂರು; ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ನಿಂದ ಕರ್ನಾಟಕ ರತ್ನ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಸಮಾರಂಭ ನಗರದ ಬೆಂಗಳೂರು ವೈದ್ಯಕೀಯ ಕಾಲೇಜಿನ ಸಭಾಂಗಣದಲ್ಲಿ ಆಯೋಜಿಸಲಾಗಿತ್ತು. 

- Advertisement -

ಕನ್ನಡ ನಾಡು, ನುಡಿ, ಸಂಸ್ಕೃತಿಯನ್ನು ಪ್ರತಿಬಿಂಬಿಸುವ ವೈವಿಧ್ಯಮಯ ಕಲಾ ತಂಡಗಳ ಪ್ರದರ್ಶನದ ನಡುವೆ ಆಯೋಜಿಸಿದ್ದ ಸಮಾರಂಭದಲ್ಲಿ ಹತ್ತು ಮಂದಿಗೆ ಕರ್ನಾಟಕ ರತ್ನ ಮತ್ತು 66 ಮಂದಿಗೆ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಲಾಯಿತು. ದಿ ನ್ಯೂಸ್ ಪೇಪರ್ಸ್ ಅಸೋಸಿಯೇಷನ್ ಕರ್ನಾಟಕದ ಸಂಸ್ಥಾಪಕ ಅಧ್ಯಕ್ಷ ಶ್ರಾವಣ ಲಕ್ಷ್ಮಣ ನೇತೃತ್ವದಲ್ಲಿ ಸಮಾರಂಭ ಆಯೋಜಿಸಲಾಗಿತ್ತು.

ವಿವಿಧ ವಲಯಗಳಲ್ಲಿ ಸೇವೆ ಸಲ್ಲಿಸಿದವರಿಗೆ ಪದ್ಮಶ್ರೀ ತುಳಸಿ ಗೌಡ ಅವರು ಪ್ರಶಸ್ತಿ ನೀಡಿ ಗೌರವಿಸಿದರು. ಪ್ರಜಾ ಪ್ರಗತಿ ಪತ್ರಿಕೆಯ ಬೆಂಗಳೂರು ವರದಿಗಾರ ನಂಜುಂಡಪ್ಪ.ವಿ, ಪತ್ರಕರ್ತರಾದ ಕೆರೆ ಮಂಜುನಾಥ್, ಗೌರೀಶ್ ಅಕ್ಕಿ,  ಬೆಂಗಳೂರು ಹುಡುಗ ಸಂಘಟನೆಯ ವಿನೋದ್ ಕರ್ತವ್ಯ,  ಬಿ.ಬಿ.ಎಂ.ಪಿಯ ನೌಕರರ ಆರೋಗ್ಯ ಸುಧಾರಣಾ ಯೋಜನೆಯ ನೋಡೆಲ್ ಅಧಿಕಾರಿ ಡಾ. ಸಂಧ್ಯಾ ಜಯಕುಮಾರ್ ಮತ್ತಿತರರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಗಡಿನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಸಿ. ಸೋಮಶೇಖರ್, ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಮಾಜಿ ಅಧ್ಯಕ್ಷ ಡಾ. ಲಿಂಗೇಗೌಡ ಮತ್ತಿತರರು ಉಪಸ್ಥಿತರಿದ್ದರು. 

- Advertisement -

ಸಂಜೆ ನಡೆದ ಸಮಾರಂಭದಲ್ಲಿ ಸಭಾಪತಿ ಬಸವರಾಜ ಹೊರಟ್ಟಿ, ಆಯುರ್ ಆಶ್ರಮದ ಸಂಸ್ಥಾಪಕ ಅಧ್ಯಕ್ಷ ಡಾ.ವಿಶ್ವ ಸಂತೋಷ ಭಾರತಿ ಸ್ವಾಮೀಜಿ, ಚಿತ್ರನಟಿ ಶೃತಿ ಅವರು ವಿಧಾನಪರಿಷತ್ ಮಾಜಿ ಸದಸ್ಯ ಡಾ. ಟಿ.ಎ. ಸರವಣ, ಪರಿಶ್ರಮ್ ನೀಟ್ ಅಕಾಡೆಮಿಯ ಎಂ.ಡಿ. ಪ್ರದೀಪ್ ಈಶ್ವರ್ ಮತ್ತಿತರರಿಗೆ ಪ್ರಶಸ್ತಿ ಪ್ರದಾನ ಮಾಡಿದರು.

Join Whatsapp