ಬಾಳ್ ಠಾಕ್ರೆ ಮೊಮ್ಮಗನನ್ನು ಮದುವೆಯಾಗಲಿರುವ ಬಿಜೆಪಿ ಮುಖಂಡನ ಪುತ್ರಿ

Prasthutha|

ಮುಂಬೈ: ಬಿಜೆಪಿ ನಾಯಕ, ಮಹಾರಾಷ್ಟ್ರದ ಮಾಜಿ ಸಚಿವ ಹರ್ಷವರ್ಧನ್ ಪಾಟೀಲ್ ಪುತ್ರಿ ಅಂಕಿತಾ ಪಾಟೀಲ್, ದಿವಂಗತ ಬಾಳ್ ಠಾಕ್ರೆ ಅವರ ಮೊಮ್ಮಗ ನಿಹಾರ್ ಅವರನ್ನು ಡಿಸೆಂಬರ್ 28 ರಂದು ಮುಂಬೈನ ಹೋಟೆಲ್ ನಲ್ಲಿ ಕೆಲವು ಆಯ್ದ ಗಣ್ಯರ ಸಮ್ಮುಖದಲ್ಲಿ ವಿವಾಹವಾಗಲಿದ್ದಾರೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -

ಅಂಕಿತಾ ಪಾಟೀಲ್ ಅವರು ಪ್ರಸ್ತುತ ಕಾಂಗ್ರೆಸ್ ಪಕ್ಷದಿಂದ ಪುಣೆ ಜಿಲ್ಲಾ ಪರಿಷತ್ ಸದಸ್ಯರಾಗಿದ್ದಾರೆ ಮತ್ತು ಭಾರತೀಯ ಸಕ್ಕರೆ ಕಾರ್ಖಾನೆ ಸಂಘದ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಂಕಿತಾ ತಂದೆ ಹರ್ಷವರ್ಧನ್ ಪಾಟೀಲ್ 2019 ರಲ್ಲಿ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಸೇರ್ಪಡೆಯಾಗಿದ್ದರು.

ನಿಹಾರ್ ಠಾಕ್ರೆ ಶಿವಸೇನಾ ಸಂಸ್ಥಾಪಕ ದಿವಂಗತ ಬಾಳೆ ಠಾಕ್ರೆ ಮೊಮ್ಮಗ ಮತ್ತು ದಿವಂಗತ ಬಿಂದುಮಾಧವ್ ಠಾಕ್ರೆ ಅವರ ಮಗ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಸೋದರಳಿಯ ನಿಹಾರ್, ಮುಂಬೈಯಲ್ಲಿ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Join Whatsapp