BMW ಮುಂಬೈ ಶೋರೂಂನಲ್ಲಿ ಭಾರಿ ಅಗ್ನಿ ದುರಂತ : ಸುಟ್ಟು ಕರಕಲಾದ 40 ಕ್ಕೂ ಹೆಚ್ಚು ಕಾರುಗಳು

Prasthutha: December 8, 2021

ಮುಂಬೈ : ನವಿ ಮುಂಬೈನ ಟುರ್ಬೆ ಎಂಐಡಿಸಿ ಏರಿಯಾದಲ್ಲಿರುವ BMW ಶೋರೂಮ್ನಲ್ಲಿ ಭಾರಿ ಪ್ರಮಾಣದ ಅಗ್ನಿ ಅವಘಡ ಆಗಿದ್ದು, ಸುಮಾರು 40 ಬಿಎಂಡಬ್ಲ್ಯೂ ಕಾರುಗಳು ಸುಟ್ಟುಕರಕಲಾಗಿವೆ. ಅವಘಡದಲ್ಲಿ ಯಾರೂ ಮೃತಪಟ್ಟ ಬಗ್ಗೆ ವರದಿಯಾಗಿಲ್ಲ. ಈ ಶೋರೂಂನಲ್ಲಿಯೇ ಕಾರುಗಳನ್ನು ಪಾರ್ಕ್ ಮಾಡಲಾದ ಗೋಡೌನ್ ಕೂಡ ಇತ್ತು. ಇಂದು ಮುಂಜಾನೆ 5.30ರಹೊತ್ತಿಗೆ ಬೆಂಕಿ ಬಿದ್ದಿದೆ ಎಂದು ಎಂಐಡಿಸಿ ಅಗ್ನಿಶಾಮಕ ದಳದ ಮುಖ್ಯ ಅಧಿಕಾರಿ ಆರ್.ಬಿ.ಪಾಟೀಲ್ ತಿಳಿಸಿದ್ದಾರೆ.

ಬೆಂಕಿಯ ತೀವ್ರತೆ ಅತಿ ಹೆಚ್ಚಾಗಿ ಇದ್ದುದರಿಂದ ಕೇವಲ ಎಂಐಡಿಸಿ ಪ್ರದೇಶದ ಅಗ್ನಿಶಾಮಕ ದಳದ ಸಿಬ್ಬಂದಿ, ವಾಹನ ಸಾಕಾಗಲಿಲ್ಲ. ನೆರುಲ್, ವಶಿಯಿಂದಲೂ ಅಗ್ನಿಶಾಮಕ ದಳದ ಸಿಬ್ಬಂದಿ ಬಂದರು. ಒಟ್ಟು 10 ಫೈರ್ ಫೈಟ್ ಟ್ರಕ್ಗಳನ್ನು ತರಲಾಗಿತ್ತು. ಬೆಂಕಿ ನಂದಿಸಲು 6ಗಂಟೆಗಳ ಕಾಲ ಬೇಕಾಯಿತು ಎಂದು ವರದಿಯಾಗಿದೆ.

ಶೋರೂಂ ಮತ್ತು ಗೋಡೌನ್ಗೆ ಬೆಂಕಿ ಬೀಳಲು ನಿಜವಾದ ಕಾರಣ ಇನ್ನೂ ಪತ್ತೆಯಾಗಿಲ್ಲ. ಪೊಲೀಸರು ತನಿಖೆ ಪ್ರಾರಂಭ ಮಾಡಿದ್ದಾರೆ. ಮೊದಲು ಬೆಂಕಿ ಹೊತ್ತಿದ್ದು ಕಾರು ಶೋರೂಂಗೆ ಸೇರಿದ ಮಳಿಗೆಯಲ್ಲಿ ಪಾರ್ಕ್ ಮಾಡಲಾಗಿದ್ದ ಡಿ-207 ಬಿಎಂಡಬ್ಲ್ಯೂ ಕಾರಿನಲ್ಲಿ. ಅದು ಒಮ್ಮೆಲೇ ಪಸರಿಸುತ್ತ ಹೋಗಿ ಸುಮಾರು 40 ಕಾರುಗಳು ಧಗಧಗನೆ ಹೊತ್ತಿ ಉರಿದಿವೆ. ಇದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಿದೆ. 40-45 ಬಿಎಂಡಬ್ಲ್ಯೂಕಾರುಗಳು ಮತ್ತು ಬಿಎಂಡಬ್ಲ್ಯೂ, ಲಂಬೋರ್ಘಿನಿ, ಪೋರ್ಷೆ, ರಾಯ್ಸ್ ರೋಲ್ಸ್ ಇತ್ಯಾದಿಗಳ ಬಿಡಿ ಭಾಗಗಳು ಬೂದಿಯಾಗಿ ಮಾರ್ಪಟ್ಟಿವೆ.

ನಿಮ್ಮ ಚಂದಾ ಹಣ ಪಾವತಿಸಲು ಈ ಕೆಳಗಿನ ಬಟನ್ ಮೇಲೆ ಕ್ಲಿಕ್ ಮಾಡಿ.

ಜನಪರ ಪತ್ರಿಕೋದ್ಯಮವನ್ನು ಬೆಂಬಲಿಸಿ
ಪ್ರಸ್ತುತದ ಬೆಳವಣಿಗೆಯಲ್ಲಿ ಪಾಲುದಾರರಾಗಿ
ಜನಸಾಮಾನ್ಯರ ಜ್ವಲಂತ ಸಮಸ್ಯೆಗಳಿಗೆ ಸದಾ ಮಿಡಿಯುತ್ತಾ, ಧ್ವನಿ ಇಲ್ಲದ ಸಮುದಾಯಗಳ ಧ್ವನಿಯಾಗುತ್ತಾ ಮಾಧ್ಯಮ ಲೋಕದಲ್ಲಿ ಸ್ವತಂತ್ರವಾಗಿ ಕಾರ್ಯಾಚರಿಸುತ್ತಿರುವ ಪ್ರಸ್ತುತಕ್ಕೆ ನಿಮ್ಮ ಪ್ರೋತ್ಸಾಹ, ಬೆಂಬಲ ಯಾವತ್ತೂ ಇರಲಿ. ಪ್ರಸ್ತುತಕ್ಕೆ ದೇಣಿಗೆ ನೀಡಲು ಬಯಸುವವರು ಈ ಕೆಳಗಿನ ಲಿಂಕ್ ಮೇಲೆ ಕ್ಲಿಕ್ ಮಾಡಿ ಹಣವನ್ನು ಪಾವತಿಸಬಹುದು.

ಧನ್ಯವಾದಗಳು

ಟಾಪ್ ಸುದ್ದಿಗಳು

ವಿಶೇಷ ವರದಿ

error: Content is protected !!