2 ಕೋಟಿ ಬಿಗ್ ಬಾಸ್ಕೆಟ್ ಗ್ರಾಹಕರ ದತ್ತಾಂಶ ಸೋರಿಕೆ ಶಂಕೆ | ಬೆಂಗಳೂರಿನಲ್ಲಿ ದೂರು ದಾಖಲು

Prasthutha|

ಬೆಂಗಳೂರು : ಆನ್ ಲೈನ್ ದಿನಸಿ ಮಾರುಕಟ್ಟೆ ‘ಬಿಗ್ ಬಾಸ್ಕೆಟ್’ ಗ್ರಾಹಕರ ದತ್ತಾಂಶಗಳು ಸೋರಿಕೆಯಾಗಿವೆ ಎಂದು ದೂರು ದಾಖಲಾಗಿದೆ. ಸುಮಾರು 2 ಕೋಟಿ ಗ್ರಾಹಕರ ದತ್ತಾಂಶ ಸೋರಿಕೆಯಾಗಿದೆ ಎಂದು ‘ಬಿಗ್ ಬಾಸ್ಕೆಟ್’ ಬೆಂಗಳೂರಿನಲ್ಲಿ ದೂರು ದಾಖಲಿಸಿದೆ. ಅಮೆರಿಕ ಮೂಲದ ಸೈಬರ್ ಭದ್ರತೆ ಗುಪ್ತಚರ ‘ಸೈಬಲ್’, ಹ್ಯಾಕರ್ ಒಬ್ಬ ರೂ.30 ಲಕ್ಷಕ್ಕೆ ದತ್ತಾಂಶ ಮಾರಾಟಕ್ಕಿಟ್ಟಿದ್ದಾನೆ ಎಂದಿದೆ.

ನಮ್ಮ ದಿನನಿತ್ಯದ ಡಾರ್ಕ್ ವೆಬ್ ನಿರ್ವಹಣೆಯ ವೇಳೆ, ಸೈಬಲ್ ನ ಸಂಶೋಧಕರು ಬಿಗ್ ಬಾಸ್ಕೆಟ್ ದತ್ತಾಂಶ ಸೈಬರ್ ಕ್ರೈಂ ಮಾರ್ಕೆಟ್ ನಲ್ಲಿ 40,000 ಡಾಲರ್ ಗೆ ಮಾರಾಟಕ್ಕಿದೆ ಎಂದು ಸಂಸ್ಥೆ ತನ್ನ ಬ್ಲಾಗ್ ನಲ್ಲಿ ಪೋಸ್ಟ್ ಮಾಡಿದೆ.

- Advertisement -

ಆದಾಗ್ಯೂ, ತಮ್ಮ ಗ್ರಾಹಕರ ಹಣಕಾಸು ದತ್ತಾಂಶ ಸುರಕ್ಷಿತವಾಗಿದೆ ಎಂಬ ಭರವಸೆಯಿದೆ. ದತ್ತಾಂಶ ಸೋರಿಕೆಯಾಗಿದೆ ಎನ್ನಲಾದ ಬಗ್ಗೆ ಕೆಲವು ದಿನಗಳ ಹಿಂದೆ ಗಮನಕ್ಕೆ ಬಂದಿದೆ. ಈ ಬಗ್ಗೆ ದೃಢೀಕರಣಕ್ಕೆ ತಜ್ಞರ ತಂಡ ಕಾರ್ಯನಿರ್ವಹಿಸುತ್ತಿದೆ.  ಬಗ್ಗೆ ದೂರು ದಾಖಲಾಗಿದೆ.   

- Advertisement -