ಕ್ವಾರಂಟೈನ್ ಸೆಂಟರ್ ನಲ್ಲಿ ಮೊಬೈಲ್ ಬಳಕೆ | ಅರ್ನಬ್ ಗೋಸ್ವಾಮಿ ಜೈಲಿಗೆ ಶಿಫ್ಟ್

Prasthutha|

ಮುಂಬೈ : ಆತ್ಮಹತ್ಯೆ ಪ್ರಚೋದನೆ ಪ್ರಕರಣದ ಆರೋಪದಲ್ಲಿ ಬಂಧಿತನಾಗಿರುವ ‘ರಿಪಬ್ಲಿಕ್ ಟಿವಿ’ ಪ್ರಧಾನ ಸಂಪಾದಕ, ಬಿಜೆಪಿ ಬೆಂಬಲಿಗ ಪತ್ರಕರ್ತ ಅರ್ನಬ್ ಗೋಸ್ವಾಮಿಯನ್ನು ನವಿ ಮುಂಬೈಯ ತಲೋಜ ಸೆಂಟ್ರಲ್ ಜೈಲಿಗೆ ಸ್ಥಳಾಂತರಿಸಲಾಗಿದೆ. ಆಲಿಬಾಗ್ ಕೋವಿಡ್ 19 ಕ್ವಾರಂಟೈನ್ ಕೇಂದ್ರದಲ್ಲಿ ಗೋಸ್ವಾಮಿ ಸೆಲ್ ಫೋನ್ ಬಳಕೆ ಮಾಡಿರುವ ಆರೋಪದ ಹಿನ್ನೆಲೆಯಲ್ಲಿ, ಆತನನ್ನು ಜೈಲಿಗೆ ಶಿಫ್ಟ್ ಮಾಡಲಾಗಿದೆ ಎಂದು ವರದಿಗಳು ತಿಳಿಸಿವೆ.

- Advertisement -

ಗೋಸ್ವಾಮಿಯಿಂದ ಫೋನ್ ವಶಪಡಿಸಿಕೊಳ್ಳಲಾಗಿದೆ. ಯಾರ ಫೋನ್ ಬಳಸಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಗೋಸ್ವಾಮಿಯ ಮಧ್ಯಂತರ ಜಾಮೀನು ಅರ್ಜಿಯ ತೀರ್ಪು ಇಂದು ಮಧ್ಯಾಹ್ನ 3 ಗಂಟೆಗೆ ಬಾಂಬೆ ಹೈಕೋರ್ಟ್ ಪ್ರಕಟಿಸಲಿದೆ.

ಇಂಟಿರಿಯನ್ ಡಿಸೈನರ್ ಅನ್ವಯ್ ನಾಯ್ಕ್ ಮತ್ತು ಅವರ ತಾಯಿಯ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಲ್ಲಿ ಗೋಸ್ವಾಮಿ ಬಂಧಿತನಾಗಿದ್ದಾನೆ. ನ.4ರಂದು ಪೊಲೀಸರು ಆತನನ್ನು ವಶಕ್ಕೆ ಪಡೆದಿದ್ದರು. ಬಳಿಕ ನ್ಯಾಯಾಲಯ ಆತನಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಆಲಿಬಾಗ್ ಜೈಲಿನ ಕೈದಿಗಳಿಗಾಗಿ ಕಾದಿರಿಸಲಾದ ಸ್ಥಳೀಯ ಕೋವಿಡ್ ಸೆಂಟರ್ ಶಾಲೆಯೊಂದರಲ್ಲಿ ಆತನನ್ನು ಇರಿಸಲಾಗಿತ್ತು.  

Join Whatsapp