ಅಚ್ಛೇ ದಿನ್ ! : ಸತತ ಐದು ದಿನಗಳಿಂದ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ

Prasthutha|

ಬೆಂಗಳೂರು : ಕಳೆದ ಸತತ ಐದು ದಿನಗಳಿಂದ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಕಾಣುತ್ತಲೇ ಇದೆ. ಒಂದೆಡೆ ಕೊರೊನ ಸಂಕಷ್ಟದಿಂದ ಜನ ತತ್ತರಿಸಿದ್ದರೆ, ಬೆಲೆ ಏರಿಕೆಯೂ ಬಡ ಹಾಗೂ ಮಧ್ಯಮ ವರ್ಗದ ಜನರನ್ನು ಬಾಧಿಸುತ್ತಿದೆ.

ರಾಜಧಾನಿ ಬೆಂಗಳೂರಿನಲ್ಲಿ ಇಂದು ಕೂಡ ಪೆಟ್ರೋಲ್ ಮೇಲೆ ಲೀಟರ್ ಗೆ 6 ಪೈಸೆ ಏರಿಕೆಯಾಗಿದ್ದು, ಡೀಸೆಲ್ ಬೆಲೆ 17 ಪೈಸೆಗೆ ಏರಿಕೆಯಾಗಿದೆ. ಆ ಮೂಲಕ ಪೆಟ್ರೋಲ್ ಬೆಲೆ 84.31 ರೂ. ಮತ್ತು ಡೀಸೆಲ್ ಬೆಲೆ 75.70 ರೂ.ಗೆ ಏರಿಕೆಯಾಗಿದೆ.  

- Advertisement -

ದೆಹಲಿಯಲ್ಲಿ ಲೀಟರ್ ಗೆ ಪೆಟ್ರೋಲ್ ಬೆಲೆ 81.59, ಡೀಸೆಲ್ ಗೆ 71.41 ರೂ. ಆಗಿದೆ. ಚೆನ್ನೈನಲ್ಲಿ ಡೀಸೆಲ್ ಬೆಲೆ 76.88 ಮತ್ತು ಕೊಲ್ಕಾದಲ್ಲಿ 74.98 ಮತ್ತು ಮುಂಬೈನಲ್ಲಿ 77.90 ರೂ. ಆಗಿದೆ. ಪೆಟ್ರೋಲ್ ದರ ಚೆನ್ನೈನಲ್ಲಿ 84.64, ಕೊಲ್ಕತಾದಲ್ಲಿ 83.15 ಮತ್ತು ಮುಂಬೈಯಲ್ಲಿ 88.29 ರೂ. ಆಗಿದೆ.

- Advertisement -