ಕೊಪ್ಪಳದಲ್ಲಿ ದಲಿತ ಮಹಿಳೆಗೆ ಮೇಲ್ಜಾತಿ ವ್ಯಕ್ತಿಯಿಂದ ಹಲ್ಲೆ| WIM ಖಂಡನೆ

Prasthutha|

ಬೆಂಗಳೂರು: ಕೊಪ್ಪಳದಲ್ಲಿ ದಲಿತ ಮಹಿಳೆಯ ಮೇಲೆ ಮೇಲ್ಜಾತಿಯ ವ್ಯಕ್ತಿಯೋರ್ವರು ದೌರ್ಜನ್ಯವೆಸಗಿರುವುದನ್ನು ವಿಮೆನ್ ಇಂಡಿಯಾ ಮೂವ್ಮೆಂಟ್(WIM) ರಾಜ್ಯ ಕಾರ್ಯದರ್ಶಿ ತನುಜಾವತಿ ತೀವ್ರವಾಗಿ ಖಂಡಿಸಿದ್ದಾರೆ.

- Advertisement -

ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆಗೊಳಿಸಿರುವ ಅವರು, ದಲಿತ ಮಹಿಳೆಯ ಹಸುವೊಂದು ಮೇಲ್ಜಾತಿ ವ್ಯಕ್ತಿಯ ಹೊಲಕ್ಕೆ ಪ್ರವೇಶಿಸಿದ ಕಾರಣಕ್ಕಾಗಿ ಅವಾಚ್ಯ ಶಬ್ದಗಳಿಂದ ಬೈದು ಅತ್ಯಂತ ಅಮಾನವೀಯವಾಗಿ ಚಪ್ಪಲಿಯಿಂದ ಹಲ್ಲೆ ನಡೆಸಲಾಗಿದೆ. ಸ್ವಾತಂತ್ರ್ಯ ಸಿಕ್ಕಿ 75 ವರ್ಷಗಳು ಕಳೆದರೂ ಜಾತಿ ನಿಂದನೆ ಎಂಬುದು ಚಾಲ್ತಿಯಲ್ಲಿ ಇರುತ್ತದೆ. ಅಧಿಕಾರಕ್ಕೆ ಬಂದ ರಾಜಕೀಯ ಪಕ್ಷಗಳು ಇದನ್ನು ನಿರ್ಮೂಲನೆಗೊಳಿಸುವ ಇಚ್ಛಾಶಕ್ತಿಯನ್ನು ಹೊಂದದೆ ಇಂತಹ ಕೃತ್ಯಗಳನ್ನೆಸಗಿದವರಿಗೆ ಕಾನೂನು ವ್ಯವಸ್ಥೆಯ ಮೂಲಕ ಶಿಕ್ಷೆಯನ್ನು ನೀಡದೆ ತನ್ನ ರಾಜಕೀಯ ಲಾಭಕ್ಕೋಸ್ಕರ ಜಾತಿ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿರುವುದು ನಾಚಿಕೆಗೇಡಿನ ವಿಷಯವಾಗಿದೆ. ಅದರಲ್ಲೂ ಪ್ರಸಕ್ತ ಆಡಳಿತದಲ್ಲಿರುವಂತಹ ಬಿಜೆಪಿ ಸರ್ಕಾರಕ್ಕೆ ಇದೊಂದು ಜಾಯಮಾನವಾಗಿ ಬಿಟ್ಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

  ಅನ್ಯಾಯಕ್ಕೊಳಗಾದ ಮಹಿಳೆಯು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಆಕೆಯ ಸಂಪೂರ್ಣ ಖರ್ಚು ವೆಚ್ಚಗಳನ್ನು ಸರ್ಕಾರವು ನಿರ್ವಹಿಸಬೇಕು. ತಪ್ಪಿತಸ್ಥರಿಗೆ ಸರಿಯಾದ  ಕಾನೂನು ಕ್ರಮಗಳನ್ನು ಜರುಗಿಸಬೇಕು ಹಾಗೂ ಸೂಕ್ತ ಭದ್ರತೆಯನ್ನೊದಗಿಸಬೇಕೆಂದು ತನುಜಾವತಿ ಒತ್ತಾಯಿಸಿದ್ದಾರೆ.
Join Whatsapp