ಛತ್ತೀಸ್‌ಗಢ: ಬಿಜೆಪಿ ಮುಖಂಡನ ಗುಂಡಿಕ್ಕಿ ಹತ್ಯೆ

Prasthutha|

ನಾರಾಯಣ್‌ಪುರ: ಬಿಜೆಪಿ ಮುಖಂಡನೋರ್ವನನ್ನು ಗುಂಡಿಕ್ಕಿ ಹತ್ಯೆಗೈದ ಘಟನೆ ಛತ್ತೀಸ್‌ಗಢದ ನಾರಾಯಣ್‌ಪುರ ಜಿಲ್ಲೆಯಲ್ಲಿ ನಡೆದಿದೆ.

- Advertisement -

ಹತ್ಯೆಗೀಡಾದವರನ್ನು ಬಿಜೆಪಿ ನಾರಾಯಣ್‌ಪುರ ಜಿಲ್ಲಾ ಘಟಕದ ಉಪಾಧ್ಯಕ್ಷ ಸಾಗರ್ ಸಾಹು ಎಂದು ಗುರುತಿಸಲಾಗಿದೆ.

ಛೋಟೆಡೊಂಗರ್ ಗ್ರಾಮದಲ್ಲಿ ತಮ್ಮ ಮನೆಯಲ್ಲಿದ್ದಾಗ ರಾತ್ರಿ ಸುಮಾರು 8 ಗಂಟೆಗೆ ಇಬ್ಬರು ದಾಳಿಕೋರರು ಕುಟುಂಬ ಸದಸ್ಯರ ಎದುರುಗಡೆಯೇ ಸಾಹು ಮೇಲೆ ಗುಂಡು ಹಾರಿಸಿದ್ದಾರೆ.
ತಕ್ಷಣ ಅವರನ್ನು ನಾರಾಯಣ್‌ಪುರ ಜಿಲ್ಲಾ ಆಸ್ಪತ್ರೆಗೆ
ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

- Advertisement -

ಈ ಕೃತ್ಯದಲ್ಲಿ ನಕ್ಸಲರ ಕೈವಾಡ ಇದೆ ಎಂದು ಮೇಲ್ನೋಟಕ್ಕೆ ತಿಳಿದು ಬರುತ್ತಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರ ಬಿಜಾಪುರ ಜಿಲ್ಲೆಯಲ್ಲಿ ಬಿಜೆಪಿ ಅವಪಳ್ಳಿ ಮಂಡಲ ಘಟಕದ ಅಧ್ಯಕ್ಷ ನೀಲಕಂಠ ಕಾಕೆಮ್ (40) ನಕ್ಸಲರಿಂದ ಕೊಲೆಗೀಡಾಗಿದ್ದರು.

Join Whatsapp