ಹಾಸನ: ಕಳೆದ 8 ತಿಂಗಳ ಹಿಂದೆ ಜಾತಿ ಕಾರಣಕ್ಕೆ ದಲಿತರಿಗೆ ಹೊಟೇಲ್ ಒಳಗೆ ಪ್ರವೇಶ ನೀಡದೇ ಹೊರ ಕಳುಹಿಸಿದ್ದ ಗ್ರಾಮದ ದೇವಾಲಯವೊಂದನ್ನು ಪ್ರವೇಶಿಸುವಲ್ಲಿ ಚನ್ನರಾಯಪಟ್ಟಣ ತಾಲೂಕಿನ ದಿಂಡಗೂರಿನ ದಲಿತರು ಯಶಸ್ವಿಯಾಗಿದ್ದಾರೆ.
ಮೇಲ್ಜಾತಿ ಮತ್ತು ದಲಿತರ ಜೊತೆಗೆ ತಹಶೀಲ್ದಾರ್ ಮಾರುತಿ ಸಭೆ ನಡೆಸಿದ ಬೆನ್ನಲ್ಲೇ ದಲಿತರು ದೇವಾಲಯ ಪ್ರವೇಶಿಸಿದ್ದಾರೆ.
ದಲಿತರು ಗ್ರಾಮದ ದೇವಾಲಯಗಳಿಗೆ ಮೊದಲ ಬಾರಿಗೆ ಪ್ರವೇಶ ಪಡೆದಿದ್ದು ಇದರಿಂದ ಗ್ರಾಮದಲ್ಲಿ ಬೂದಿ ಮುಚ್ಚಿದ ಕೆಂಡದಂತಹ ಪರಿಸ್ಥತಿಗೆ ಕಾರಣವಾಗಿದೆ. ಯಾವಾಗ ಏನು ಬೇಕಾದರೂ ನಡೆಯಬಹುದು, ಯಾವ ಘಟನೆ ಕೂಡ ನಡೆಯಬಹುದು ಎಂಬ ಭಯದ ವಾತಾವರಣ ನಿರ್ಮಾಣವಾಗಿದೆ.
ಮುಂಜಾಗ್ರತಾ ಕ್ರಮವಾಗಿ ಗ್ರಾಮದಲ್ಲಿ ಹೆಚ್ಚಿನ ಪೊಲೀಸರನ್ನು ನಿಯೋಜಿಸಿ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ.