ದ.ಕ. ಜಿಲ್ಲೆಯಲ್ಲಿ ಪ್ಯಾಲೆಸ್ತೀನ್ ಜನರ ಹೋರಾಟವನ್ನು ಬೆಂಬಲಿಸಿ SDPI ಭಿತ್ತಿಪತ್ರ ಪ್ರದರ್ಶನ

Prasthutha|

ಮಂಗಳೂರು : ಪ್ಯಾಲೇಸ್ತೀನ್ ಮೇಲೆ ಆಕ್ರಮಣ ನಡೆಸುತ್ತಿರುವ ಇಸ್ರೇಲ್ ಸೇನೆಯನ್ನು ವಿರೋಧಿಸಿ ಮತ್ತು ಗಾಝಾ ಪಟ್ಟಿಯ ಜನರ ಹೋರಾಟವನ್ನು ಬೆಂಬಲಿಸಿ ಎಸ್‌ಡಿಪಿಐ ವತಿಯಿಂದ ದ.ಕ ಜಿಲ್ಲೆಯ ಎಂಟು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಹಲವಾರು ಕಡೆಗಳಲ್ಲಿ ಇಂದು ಭಿತ್ತಿಪತ್ರ ಪ್ರದರ್ಶನ ಮಾಡಲಾಯಿತು.

- Advertisement -

ಪ್ಯಾಲೆಸ್ತೀನ್ ಜನತೆಯ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಕ್ರೂರ ವಂಶ ಹತ್ಯೆಯನ್ನು ಖಂಡಿಸಿದ SDPI ಕಾರ್ಯಕರ್ತರು, ಮಾತೃಭೂಮಿಗಾಗಿ ಜಿಯೋನಿಸ್ಟ್ ಇಸ್ರೇಲ್‌ ವಿರುದ್ಧ ಹೋರಾಡುತ್ತಿರುವ ಪ್ಯಾಲೆಸ್ತೀನ್ ಜನರಿಗೆ ಭಾರತದ ಬೆಂಬಲ ಮುಂದುವರಿಯಬೇಕು ಎಂದು ಆಗ್ರಹಿಸಿದರು.

ಪ್ಯಾಲೇಸ್ತೀನ್ ಜನರ ಹೋರಾಟಕ್ಕೆ ಭಾರತೀಯರಾದ ನಾವು ಬೆಂಬಲ ಸೂಚಿಸಿ ಭಿತ್ತಿಪತ್ರ ಪ್ರದರ್ಶನ ಮಾಡಿರುವುದಾಗಿ ಎಸ್‌ಡಿಪಿಐ ದ.ಕ. ಕನ್ನಡ ಜಿಲ್ಲಾ ಸಮಿತಿ ತಿಳಿಸಿದೆ.