ಸಿಎಂ ಇಬ್ರಾಹಿಂ ಬಗ್ಗೆ ಹೊಸ ಬಾಂಬ್ ಸಿಡಿಸಿದ ಎ. ಮಂಜು

Prasthutha|

ಬೆಂಗಳೂರು: ಬಿಜೆಪಿ-ಜೆಡಿಎಸ್ ವಿಚಾರವಾಗಿ ಮುನಿಸಿಕೊಂಡಿರುವ ಸಿಎಂ ಇಬ್ರಾಹಿಮ್, ಬಿಜೆಪಿಯೊಂದಿಗೆ ಮೈತ್ರಿ ಬಗ್ಗೆ ನನಗೆ ಹೇಳಿಲ್ಲ, ನನ್ನದೇ ಒರಿಜಿನಲ್ ಜೆಡಿಎಸ್, ನಾನೆ ಅದರ ಅಧ್ಯಕ್ಷ ಎನ್ನುತ್ತಿರುವಾಗಲೇ ಎಚ್ ಡಿ ದೇವೇಗೌಡ ಇಬ್ರಾಹಿಮ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದರು. ಇದೀಗ ಸಿಎಂ ಇಬ್ರಾಹಿಂ ಕುರಿತು ಜೆಡಿಎಸ್ ಶಾಸಕ ಎ. ಮಂಜು ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿ ಜೆಡಿಎಸ್ ಮೈತ್ರಿ ಬಗ್ಗೆ ಸಭೆ ಸೇರಿದ್ದಾಗ ರಾಜ್ಯಾಧ್ಯಕ್ಷರಾಗಿ ಸಿಎಂ ಇಬ್ರಾಹಿಂ ಕೂಡ ಇದ್ದರು. ಎಲ್ಲೂ ಕೂಡ ಈ ಬಗ್ಗೆ ವಿರೋಧವನ್ನು ಅವರು ವ್ಯಕ್ತಪಡಿಸಲೇ ಇಲ್ಲ ಎಂದಿದ್ದಾರೆ. ಈಗ ಅವರು ಈ ಬಗ್ಗೆ ನನಗೆ ಗೊತ್ತೇ ಇಲ್ಲ ಎಂದು ಹೇಳುತ್ತಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಎಂದು ಮಂಜು ತಿವಿದಿದ್ದಾರೆ.

Join Whatsapp