ಚಿತ್ರದುರ್ಗ: ಲಂಚ ಸ್ವೀಕಾರ ವೇಳೆ ಡಿ. ದೇವರಾಜ ಅರಸು ನಿಗಮದ ಅಧಿಕಾರಿ ಲೋಕಾಯುಕ್ತ ಬಲೆಗೆ ಬಿದಿದ್ದಾರೆ. ಲೋಕಾಯುಕ್ತ ಎಸ್ಪಿ ವಾಸುದೇವರಾಮ್ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿದ್ದು, ದೇವರಾಜ ಅರಸು ನಿಗಮದ ಕೇಸ್ ವರ್ಕರ್ ಆಗಿರುವ ಮಲ್ಲೇಶ್ನನ್ನು ಬಂಧಿಸಿದ್ದಾರೆ.
50 ಸಾವಿರ ರೂ. ಸಾಲದ ಮೊತ್ತ ಬಿಡುಗಡೆ ಮಾಡಲು ಬುರುಜನಹಟ್ಟಿಯ ರಾಕೇಶ್ ಬಳಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು. 9 ಸಾವಿರ ರೂಪಾಯಿ ಲಂಚ ಸ್ವೀಕಾರ ವೇಳೆ ಲೋಕಾಯುಕ್ತ ಬಲೆಗೆ ಬಿದಿದ್ದು ಅರೆಸ್ಟ್ ಮಾಡಲಾಗಿದೆ.