ಶಾಹೀನ್ ಚಂಡಮಾರುತ: ಒಮಾನ್ ನಲ್ಲಿ 24 ಗಂಟೆಗಳಲ್ಲಿ 7 ಮಂದಿ ಸಾವು, ಬಲಿಯಾದವರ ಸಂಖ್ಯೆ 11ಕ್ಕೇರಿಕೆ

Prasthutha|

ಒಮಾನ್: ಶಾಹೀನ್ ಚಂಡಮಾರುತಕ್ಕೆ ಉತ್ತರ ಅಲ್ ಬತೀನಾದಲ್ಲಿ ಒಂದೇ ದಿನ 7 ಮಂದಿ ಸಾವನ್ನಪ್ಪಿದ್ದಾರೆ ಎಂದು ಒಮಾನ್ ನ ನ್ಯಾಷನಲ್ ಸೆಂಟರ್ ಫಾರ್ ಎಮರ್ಜೆನ್ಸಿ ಮ್ಯಾನೇಜ್‌ಮೆಂಟ್ ಸೋಮವಾರ ತಿಳಿಸಿದೆ.
ಇದರೊಂದಿಗೆ ನಿನ್ನೆಯಿಂದ ಅಪ್ಪಳಿಸಿದ ಚಂಡಮಾರುತಕ್ಕೆ ಬಲಿಯಾದವರ ಸಂಖ್ಯೆ 11 ಕ್ಕೆ ಏರಿಕೆಯಾಗಿದೆ.

- Advertisement -


ಶಾಹೀನ್ ಚಂಡಮಾರುತವು ಬತೀನಾದ ಮುಸನ್ನಾಹ್, ಕಬೂರಾಹ್ ಏರಿಯಾದಲ್ಲಿ ತೀವ್ರಗತಿಯಲ್ಲಿ ಅಪ್ಪಳಿಸಿದ್ದು ಈ ಎರಡು ಊರಿನ ಮಧ್ಯೆ ಬರುವ ಸುವೈಕ್ ನಲ್ಲಿ ಭೂ ಕುಸಿತ ಉಂಟಾಗಿದೆ.
ಶಾಹೀನ್ ಚಂಡಮಾರುತದ ಬಗ್ಗೆ ಓಮಾನ್ ‌ಮೆಟ್ ತನ್ನ ಇತ್ತೀಚಿನ ಹವಾಮಾನ ವರದಿಯಲ್ಲಿ “ಇದು ಅಲ್ ಧಹಿರಾ, ಉತ್ತರ ಅಲ್ ಬತೀನಾ, ದಕ್ಷಿಣ ಅಲ್ ಬತೀನಾ, ಅಲ್ ಬುರೈಮಿ ಮತ್ತು ಅಲ್ ದಾಖಲಿಯಾ ರಾಜ್ಯಗಳ ಮೇಲೆ ಅಂದಾಜು 70ರಿಂದ 200ಮಿ.ಮೀ ವೇಗದಲ್ಲಿ ಬೀಸುವ ಸಂಭವವಿದೆ ಎಂದು ಮಾಹಿತಿ ನೀಡಿದೆ.

Join Whatsapp