ಹೊಸಪೇಟೆ ಅಪಘಾತ | ಮೃತರ ಕುಟುಂಬಕ್ಕೆ 2 ಲಕ್ಷ ರೂ. ಪರಿಹಾರ: ಝಮೀರ್ ಅಹಮದ್

Prasthutha|

ಹೊಸಪೇಟೆ: ಸೋಮವಾರ ಸಂಜೆ ಟಿಪ್ಪರ್ ಒಂದು ಹೆದ್ದಾರಿ ವಿಭಜಕ ದಾಟಿ, ಬಂದು ಕಾರು ಮತ್ತು ಟ್ರಕ್ ಗೆ ಡಿಕ್ಕಿ ಹೊಡೆದು ಎಂಟು ಜನರ ಪೈಕಿ ಏಳು ಮಂದಿ ಮೃತಪಟ್ಟರುವ ಘಟನೆ ಹೊಸಪೇಟೆ ತಾಲ್ಲೂಕಿನ ವ್ಯಾಸನಕೆರೆ ರೈಲು ನಿಲ್ದಾಣ ಸಮೀಪ ನಡೆದಿದ್ದು, ಮೃತಪಟ್ಟ ಕುಟುಂಬಕ್ಕೆ ತಲಾ ₹2 ಲಕ್ಷ ಪರಿಹಾರ ನೀಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಝಮೀರ್ ಅಹಮದ್ ಖಾನ್ ಹೇಳಿದ್ದಾರೆ.

- Advertisement -


ಮುಖ್ಯಮಂತ್ರಿ ಅವರನ್ನು ಭೇಟಿ ಮಾಡಿ ಘಟನೆ ವಿವರಿಸಿ ಮೃತರು ಬಡ ಕುಟುಂಬದವರಾಗಿದ್ದು ನೆರವು ನೀಡುವ ಅಗತ್ಯತೆ ಕುರಿತು ಮನವರಿಕೆ ಮಾಡಿಕೊಟ್ಟಿದ್ದು ಮುಖ್ಯಮಂತ್ರಿ ಅವರು ತಲಾ ₹2 ಲಕ್ಷ ಪರಿಹಾರ ನೀಡಲು ಒಪ್ಪಿಗೆ ಸೂಚಿಸಿದ್ದಾರೆ. ಮೃತರ ಕುಟುಂಬಗಳಿಗೆ ನೆರವು ತಲುಪಿಸಲಾಗುವುದು ಎಂದು ಸಚಿವರು ತಿಳಿಸಿದ್ದಾರೆ.

Join Whatsapp