2028ರ ಒಲಿಂಪಿಕ್ಸ್ ಗೆ ಕ್ರಿಕೆಟ್ ಅಧಿಕೃತ ಸೇರ್ಪಡೆ

Prasthutha|

ನವದೆಹಲಿ: 2028ರ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಕ್ರಿಕೆಟ್ ಗೆ ಸ್ಥಾನವನ್ನು ನೀಡಲು ಅಂತಾರಾಷ್ಟ್ರೀಯ ಒಲಿಂಪಿಕ್ಸ್ ಸಮಿತಿ ಸಭೆಯಲ್ಲಿ ನಿರ್ಧಾರವನ್ನು ಕೈಗೊಳ್ಳಲಾಗಿದೆ.

- Advertisement -

ಒಲಿಂಪಿಕ್ಸ್ನಲ್ಲಿ T20 ಮಾದರಿಯ ಕ್ರಿಕೆಟ್ ಪಂದ್ಯ ಇರಲಿದೆ. ಇದರಲ್ಲಿ ಪುರುಷ ಮತ್ತು ಮಹಿಳಾ ತಂಡಗಳ ಕ್ರಿಕೆಟ್ ಪಂದ್ಯ ನಡೆಯಲಿದೆ.

ಐಒಸಿ ಅಧ್ಯಕ್ಷ ಥಾಮಸ್ ಬಾಚ್ ಅವರು ಮಾತನಾಡಿ, ಕ್ರಿಕೆಟ್ ಮತ್ತು ಇತರ ನಾಲ್ಕು ಕ್ರೀಡೆಗಳನ್ನು- ಲಾಸ್ ಏಂಜಲೀಸ್ ಗೇಮ್ಸ್ 2028ಕ್ಕೆ ಮಾತ್ರ ಸೇರಿಸುವುದಾಗಿದೆ. ಇದು ಅಮೇರಿಕನ್ ಕ್ರೀಡಾ ಸಂಸ್ಕೃತಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ.

Join Whatsapp